ಮಂಗಳೂರು: ಹುಡುಗನ ಹೆಸರಲ್ಲಿ ಫೇಸ್ಬುಕ್ ನಲ್ಲಿ ಖಾತೆ ತೆರೆದು ಪ್ರೇಮದಾಟ ಆಡುತ್ತಿದ್ದ ಮಂಗಳಮುಖಿಯನ್ನು ವಿಟ್ಲ ಠಾಣೆ ಪೊಲೀಸರು ಬಂಧಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ಹುಡುಗಿಯೊಂದಿಗೆ ಹುಡುಗನ ಹೆಸರಲ್ಲಿ ಫೇಸ್ಬುಕ್ ನಲ್ಲಿ ಖಾತೆ ತೆರೆದು ಪರಿಚಯಿಸಿಕೊಂಡಿದ್ದ ಮಂಗಳ ಮುಖಿ ಪ್ರೇಮದಾಟ ಆಡಿದ್ದು, ಬಂಧಿಸಲಾಗಿದೆ. ಫೇಸ್ಬುಕ್ ನಲ್ಲಿ ಲವ್ ಚಾಟ್ ಮಾಡಿ ನಂತರ ಹುಡುಗನ ಧ್ವನಿಯಲ್ಲಿ ಮಾತನಾಡುತ್ತಿದ್ದ ಕಾರಣ ಹುಡುಗಿ ಪ್ರೇಮ ಪ್ರಕರಣದಲ್ಲಿ ಸಿಲುಕಿಕೊಂಡಿದ್ದಾರೆ. ಹುಡುಗಿಯ ತಾಯಿ ಈ ಬಗ್ಗೆ ಬಂಟ್ವಾಳದ ವಕೀಲರಿಗೆ ಮಾಹಿತಿ ನೀಡಿದ್ದು, ನಂತರ ವಿಟ್ಲ ಪೊಲೀಸರು ತನಿಖೆ ಕೈಗೊಂಡು ಶಂಕರನಾರಾಯಣ ಬಳಿ ಆರೋಪಿಯನ್ನು ಬಂಧಿಸಲಾಗಿದೆ ಎನ್ನಲಾಗಿದೆ.