alex Certify ONLINE ಮೂಲಕ ಹಣ ವರ್ಗಾವಣೆ ಮಾಡುವವರಿಗೆ ತಿಳಿದಿರಲಿ ಈ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ONLINE ಮೂಲಕ ಹಣ ವರ್ಗಾವಣೆ ಮಾಡುವವರಿಗೆ ತಿಳಿದಿರಲಿ ಈ ಮಾಹಿತಿ

ಶೀಘ್ರ ಪಾವತಿ ಸೇವೆ (ಐಎಂಪಿಎಸ್‌) ವ್ಯವಹಾರದ ಗರಿಷ್ಠ ಮಿತಿಯನ್ನು ಎರಡು ಲಕ್ಷ ರೂ. ಗಳಿಂದ ಐದು ಲಕ್ಷ ರೂ. ಗಳವರೆಗೆ ರಿಸರ್ವ್ ಬ್ಯಾಂಕ್ (ಆರ್‌.ಬಿ.ಐ) ಏರಿಸಿದೆ. ಈ ಮೂಲಕ ದೊಡ್ಡ ಮೊತ್ತಗಳ ವ್ಯವಹಾರಗಳನ್ನು ಇನ್ನಷ್ಟು ಸರಳವಾಗಿಸಲು ಆರ್‌.ಬಿ.ಐ ಮುಂದಾಗಿದೆ.

“ಐಎಂಪಿಎಸ್ ಮೂಲಕ ತ್ವರಿತವಾಗಿ ಹಣವನ್ನು ದೇಶೀಯವಾಗಿ ವರ್ಗಾವಣೆ ಮಾಡುವ ಸವಲತ್ತನ್ನು ವಿವಿಧ ಚಾನೆಲ್‌ಗಳ ಮೂಲಕ 24×7 ಒದಗಿಸಲಾಗಿದೆ. ಗ್ರಾಹಕರಿಗೆ ಇನ್ನಷ್ಟು ಅನುಕೂಲವಾಗಲು, ಐಎಂಪಿಎಸ್‌ನ ಪ್ರತಿ ವ್ಯವಹಾರದ ಗರಿಷ್ಠ ಮಿತಿಯನ್ನು ಎರಡು ಲಕ್ಷ ರೂ.ಗಳಿಂದ ಐದು ಲಕ್ಷ ರೂ.ಗಳಿಗೆ ಏರಿಸಲಾಗಿದೆ,” ಎಂದು ಆರ್‌.ಬಿ.ಐ ಗವರ್ನರ್‌ ಶಕ್ತಿಕಾಂತ ದಾಸ್ ಅಕ್ಟೋಬರ್‌ 8ರಂದು ತಿಳಿಸಿದ್ದರು.

ATM ನಿಂದ ಹಣ ಹಿಂಪಡೆಯುವಿಕೆಗೆ ಮತ್ತೊಂದು ಹಂತದ ಭದ್ರತಾ ವ್ಯವಸ್ಥೆ ಮಾಡಿದ ಎಸ್‌.ಬಿ.ಐ

ಭಾರತೀಯ ರಾಷ್ಟ್ರೀಯ ಪಾವತಿ ನಿಗಮ (ಎನ್‌ಪಿಸಿಐ) ಈ ಐಎಂಪಿಎಸ್‌ನ ನಿಯಂತ್ರಕನಾಗಿದೆ. ದಿನದ 24 ಗಂಟೆಯೂ ತ್ವರಿತ ಹಣ ವರ್ಗಾವಣೆಯನ್ನು ಒದಗಿಸುವ ಸೇವೆ ಇದಾಗಿದೆ.

ಆನ್ಲೈನ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್ ಅಪ್ಲಿಕೇಶನ್‌ಗಳು, ಎಟಿಎಂಗಳು, ಎಸ್‌ಎಂಎಸ್‌ ಹಾಗೂ ಐವಿಆರ್‌ಎಸ್‌ಗಳು ಐಎಂಪಿಎಸ್‌ ಅನ್ನು ಬಳಸುವ ಕೆಲವೊಂದು ಹಾದಿಗಳಾಗಿವೆ. ಬ್ಯಾಂಕುಗಳ ಐಎಫ್‌ಎಸ್‌ಸಿ ಕೋಡ್ ಹಾಗೂ ಹಣ ವರ್ಗಾವಣೆಯ ವ್ಯವಹಾರದಲ್ಲಿರುವ ಮಂದಿಯ ಆಧಾರ್‌ ಸಂಖ್ಯೆಗಳಿಂದ ಈ ವ್ಯವಹಾರಗಳನ್ನು ನಡೆಸಬಹುದಾಗಿದೆ.

ಕೆಲಸದ ನಿರೀಕ್ಷೆಯಲ್ಲಿದ್ದವರಿಗೆ ಭರ್ಜರಿ ಸಿಹಿ ಸುದ್ದಿ, 1.20 ಲಕ್ಷ ಉದ್ಯೋಗಾವಕಾಶ- TCS, ಇನ್ಫೋಸಿಸ್, ವಿಪ್ರೋದಲ್ಲಿ ಭಾರಿ ನೇಮಕಾತಿ

ಐಎಂಪಿಎಸ್‌ನೊಂದಿಗೆ ಹಣವನ್ನು ತ್ವರಿತವಾಗಿ ವರ್ಗಾವಣೆ ಮಾಡಲು ಇನ್ನಷ್ಟು ಹಾದಿಗಳಿದ್ದು, ಅವುಗಳನ್ನೊಮ್ಮೆ ಹಾಗೇ ಅವಲೋಕಿಸೋಣ:

ನೆಫ್ಟ್:

ರಾಷ್ಟ್ರೀಯ ವಿದ್ಯುನ್ಮಾನ ಹಣ ವರ್ಗಾವಣೆ ವ್ಯವಸ್ಥೆಯನ್ನು ರಿಸರ್ವ್ ಬ್ಯಾಂಕ್ (ಆರ್‌.ಬಿ.ಐ) ನಡೆಸಿಕೊಡುತ್ತದೆ. ನೆಫ್ಟ್‌ ಮೂಲಕ ಜಗತ್ತಿನಾದ್ಯಂತ ಹಣ ವರ್ಗಾವಣೆ ಮಾಡಬಹುದಾಗಿದೆ. ವಿವಿಧ ರೀತಿಯ ಬ್ಯಾಂಕುಗಳ ಶಾಖೆಗಳನ್ನು ಒಳಗೊಂಡಿರುವ ನೆಫ್ಟ್ ಇಡೀ ದೇಶದಲ್ಲಿ ಉಪಸ್ಥಿತಿ ಹೊಂದಿದೆ.

ನೆಫ್ಟ್ ವ್ಯವಹಾರಗಳ ಮೇಲೆ ಆರ್‌.ಬಿ.ಐ ಹೇರುವ ಯಾವುದೇ ನಿರ್ಬಂಧಗಳು ಅನ್ವಯವಾಗುವುದಿಲ್ಲ. ಪಾವತಿ ಮಾಡುವ ಮುನ್ನ ಬಳಕೆದಾರರು ತಮ್ಮ ಬ್ಯಾಂಕ್ ನೆಫ್ಟ್‌ ಸದಸ್ಯತ್ವ ಹೊಂದಿದೆ ಎಂದು ಖಾತ್ರಿ ಪಡಿಸಬೇಕು.

ಕೃಷಿ, ವಾಹನ, ಗೃಹ, ಇತರೆ ಸಾಲದ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್: ಎಲ್ಲಾ ಬ್ಯಾಂಕ್ ಗಳಿಂದ ಬೃಹತ್ ಸಾಲ ಸಂಪರ್ಕ ಮೇಳ

ಆರ್‌.ಟಿ.ಜಿ.ಎಸ್:

ನಿರಂತರ ಹಾಗೂ ರಿಯಲ್-ಟೈಂ ಮಾದರಿಯಲ್ಲಿ ಹಣ ವರ್ಗಾವಣೆ ಮಾಡುವ ಸಾಧ್ಯತೆಯನ್ನು ಆರ್‌.ಟಿ.ಜಿ.ಎಸ್ ಕೊಡಮಾಡುತ್ತದೆ. ವ್ಯವಹಾರದಿಂದ ವ್ಯವಹಾರದ ಆಧಾರದಲ್ಲಿ ಈ ವರ್ಗಾವಣೆ ಮಾಡಲಾಗುತ್ತದೆ. ಆರ್‌.ಟಿ.ಜಿ.ಎಸ್ ಮೂಲಕ ಮಾಡುವ ಪಾವತಿಗಳನ್ನು ಹಿಂದಿರುಗಿಸಲು ಸಾಧ್ಯವಿಲ್ಲ ಏಕೆಂದರೆ ಈ ವ್ಯಹಾರದ ಮೂಲಕ ವರ್ಗಾವಣೆಯಾಗುವ ದುಡ್ಡು ಆರ್‌.ಬಿ.ಐ.ನ ದಾಖಲೆಗಳಲ್ಲಿ ನಮೂದಾಗುತ್ತದೆ.

ಆರ್‌.ಟಿ.ಜಿ.ಎಸ್‌ ಮೂಲಕ ಮಾಡುವ ವ್ಯವಹಾರಕ್ಕೆ ಗರಿಷ್ಠ ಮಿತಿ ಇರುವುದಿಲ್ಲ. ಆದರೆ ಬಳಕೆದಾರರು ಕನಿಷ್ಠ ಎರಡು ಲಕ್ಷ ರೂ.ಗಳನ್ನು ಈ ಪ್ಲಾಟ್‌ಫಾರಂ ಮೂಲಕ ಕಳುಹಿಸಬೇಕು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...