ಬೆಂಗಳೂರು : ಬಿಗ್ ಬಾಸ್ ಸ್ಪರ್ಧಿ ವರ್ತೂರ್ ಸಂತೋಷ್ ಗೆ ಸನ್ಮಾನ ಮಾಡಿದ ಪಿ ಎಸ್ ಐ ಧಿಡೀರ್ ವರ್ಗಾವಣೆಯಾಗಿದ್ದಾರೆ.
ಬೆಂಗಳೂರು ನಗರ ಪೊಲೀಸ್ ಕಮೀಷನರ್ ದಯಾನಂದ ಅವರು ಸಬ್ ಇನ್ಸ್ ಪೆಕ್ಟರ್ ಪಿಎಸ್ ಐ ತಿಮ್ಮರಾಯಪ್ಪರನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ.
ಪೊಲೀಸ್ ಸಮವಸ್ತ್ರದಲ್ಲಿ ಸನ್ಮಾನ ಮಾಡಿದ್ದಕ್ಕೆ ಪಿಎಸ್ ಐ ತಿಮ್ಮರಾಯಪ್ಪರನ್ನು ವರ್ತೂರು ಪೊಲೀಸ್ ಠಾಣೆಯಿಂದ ಅಡುಗೋಡಿ ಠಾಣೆಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.
ಹುಲಿ ಉಗುರು ಪ್ರಕರಣದಲ್ಲಿ ಬಂಧಿತನಾಗಿದ್ದ ವರ್ತೂರು ಸಂತೋಷ್ ಜೈಲು ಸೇರಿದ್ದರು. ನಂತರ ಜಾಮೀನು ಪಡೆದು ಬಿಡುಗಡೆಯಾಗಿದ್ದರು. ಬಿಗ್ ಬಾಸ್ ಮನೆಯಲ್ಲಿ ಆಟ ಮುಂದುವರೆಸಿದ ವರ್ತೂರು ಸಂತೋಷ್ ನಾಲ್ಕನೇ ರನ್ನರ್ ಅಪ್ ಆಗಿದ್ದಾರೆ.