
ಬೆಂಗಳೂರು: ವರ್ಗಾವಣೆ ನಿರೀಕ್ಷೆಯಲ್ಲಿದ್ದ ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ ಸಿಬ್ಬಂದಿಗೆ ಮುಖ್ಯವಾದ ಮಾಹಿತಿ ಇಲ್ಲಿದೆ.
ಎರಡು ಇಲಾಖೆಗಳಿಂದ ಯಾವುದೇ ವರ್ಗಾವಣೆಯ ಪ್ರಸ್ತಾವನೆ ಸಲ್ಲಿಸಬೇಡಿ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಆರೋಗ್ಯ ಇಲಾಖೆಗೆ ಸಿಎಂ ಸಚಿವಾಲಯದಿಂದ ಸೂಚನೆ ನೀಡಲಾಗಿದೆ. ಮುಂದಿನ ಆದೇಶದವರೆಗೆ ಪ್ರಸ್ತಾವನೆ ಮಂಡಿಸದಂತೆ ಸಿಎಂ ಸಚಿವಾಲಯ ತಿಳಿಸಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸೂಚನೆ ಮೇರೆಗೆ ಎರಡೂ ಇಲಾಖೆಗಳಿಗೆ ವರ್ಗಾವಣೆ ಪ್ರಸ್ತಾವನೆ ಸಲ್ಲಿಸದಂತೆ ಸಿಎಂ ಕಚೇರಿ ಸೂಚಿಸಿದೆ ಎನ್ನಲಾಗಿದೆ.