ಬೀದರ್: ಆಡಳಿತ ಪಕ್ಷದ ಬಿಜೆಪಿ ಶಾಸಕರಿಗೇ ಬಿಜೆಪಿ ಸರ್ಕಾರ ಶಾಕ್ ನೀಡಿದೆ. ಶಾಸಕ ಶರಣು ಸಲಗರ ಅವರ ಪತ್ನಿ ಬಸವಕಲ್ಯಾಣ ತಹಶೀಲ್ದಾರ್ ಸಾವಿತ್ರಿ ಸಲಗರ ಅವರನ್ನು ಸರ್ಕಾರ ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದೆ.
ಕೇಂದ್ರ ಸಚಿವ ಭಗವಂತ ಖೂಬಾ ಮತ್ತು ಸ್ಥಳೀಯ ಶಾಸಕ ಶರಣು ಸಲಗರ ನಡುವೆ ತಿಕ್ಕಾಟ ತಾರಕಕ್ಕೆ ಏರಿದೆ. ಆಗಸ್ಟ್ 13ರಂದು ಬಸವಕಲ್ಯಾಣದಲ್ಲಿ ನಡೆದ ಸ್ವಾತಂತ್ರ್ಯದ ಅಮೃತೋತ್ಸವದ ಕಾರ್ ರ್ಯಾಲಿಯಲ್ಲಿ ಸಚಿವರು ಮತ್ತು ಶಾಸಕರ ನಡುವೆ ವಾಗ್ಯುದ್ಧ ನಡೆದಿತ್ತು. ಇಬ್ಬರ ಬೆಂಬಲಿಗರ ನಡುವೆ ಘರ್ಷಣೆ ಉಂಟಾಗಿತ್ತು.
ಈ ಘಟನೆ ನಡೆದ ನಂತರ ಶಾಸಕ ಶರಣು ಸಲಗರ ಅವರ ಪತ್ನಿ ಬಸವಕಲ್ಯಾಣ ತಹಶೀಲ್ದಾರ್ ಸಾವಿತ್ರಿ ಸಲಗರ ಅವರನ್ನು ಸರ್ಕಾರ ವರ್ಗಾವಣೆಗೊಳಿಸಿದೆ. ಬಿಜೆಪಿ ಶಾಸಕರಿಗೆ ಅವರದೇ ಪಕ್ಷದ ಸರ್ಕಾರ ಶಾಕ್ ನೀಡಿದೆ. ಇದರೊಂದಿಗೆ ಕೇಂದ್ರ ಸಚಿವರು ಮತ್ತು ಶಾಸಕರ ನಡುವಿನ ಕಾದಾಟ ತಾರಕಕ್ಕೆ ಏರಿದೆ ಎಂದು ಹೇಳಲಾಗಿದೆ.