ಅನಾದಿ ಕಾಲದಿಂದಲೂ ನಮ್ಮ ದೇಶದಲ್ಲಿ ಉಡುಗೊರೆಗೆ ಮಹತ್ವದ ಸ್ಥಾನವಿದೆ. ಯಾವುದೇ ವಿಶೇಷ ಸಂದರ್ಭದಲ್ಲಿ ಪರಸ್ಪರ ಉಡುಗೊರೆ ನೀಡುವ ಪದ್ಧತಿ ರೂಢಿಯಲ್ಲಿದೆ. ಮನಸ್ಸಿಗೆ ಬಂದ ವಸ್ತುವನ್ನು ಉಡುಗೊರೆಯಾಗಿ ನೀಡುವ ಬದಲು ಅದ್ರ ಚೌಕಟ್ಟನ್ನು ಅರಿತರೆ ಒಳ್ಳೆಯದು. ಕರ್ವಾ ಚೌತ್ ದಿನ ಸಂಗಾತಿಗೆ ಉಡುಗೊರೆ ನೀಡಲು ಬಯಸಿದ್ದರೆ ಕೆಲ ವಿಷ್ಯಗಳನ್ನು ತಿಳಿದುಕೊಳ್ಳುವುದು ಒಳ್ಳೆಯದು. ಸಂಗಾತಿಗೆ ನಿಮ್ಮ ಮೇಲೆ ಪ್ರೀತಿ ಹೆಚ್ಚಾಗಬೇಕೆಂದ್ರೆ ಈ ಕೆಳಗಿನ ವಸ್ತುಗಳಲ್ಲಿ ಒಂದನ್ನು ಉಡುಗೊರೆಯಾಗಿ ನೀಡಿ.
ಪ್ರೀತಿ ಪಾತ್ರರು ಸದಾ ಸಂತೋಷದಿಂದ ಮತ್ತು ಆರೋಗ್ಯವಾಗಿ ಇರಬೇಕೆಂದು ನೀವು ಬಯಸಿದ್ರೆ ಅವರಿಗೆ ಒಂದು ಜೋಡಿ ಆನೆಯ ಪ್ರತಿಮೆಯನ್ನು ಉಡುಗೊರೆಯಾಗಿ ನೀಡಿ. ಬೆಳ್ಳಿ ಅಥವಾ ಬಂಗಾರದ ಆನೆಯನ್ನು ನೀವು ನೀಡಬೇಕು. ಕಬ್ಬಿಣದ ಆನೆಯನ್ನು ಉಡುಗೊರೆಯಾಗಿ ನೀಡಬೇಡಿ. ಕಬ್ಬಿಣಕ್ಕೆ ತುಕ್ಕು ಹಿಡಿಯುವ ಕಾರಣ ಇದು ಒಳ್ಳೆಯದಲ್ಲ.
ಕರ್ವಾ ಚೌತ್ ದಿನ ನೀವು ಗಣೇಶನ ಪ್ರತಿಮೆಯನ್ನು ಕೂಡ ಗಿಫ್ಟ್ ರೂಪದಲ್ಲಿ ನೀಡಬಹುದು. ಗಣೇಶನ ಪ್ರತಿಮೆ ಉಡುಗೊರೆಯಾಗಿ ಸಿಕ್ಕರೆ ಅದನ್ನು ಮಂಗಳವೆಂದು ಪರಿಗಣಿಸಲಾಗುತ್ತದೆ. ಗಣೇಶನ ಕೃಪೆಯಿಂದ ಜೀವನದಲ್ಲಿ ತೊಂದರೆಗಳು ಕೊನೆಗೊಳ್ಳುತ್ತವೆ. ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಇರುತ್ತದೆ.
ನೀವು ಸಂಗಾತಿಗೆ ಬೆಳ್ಳಿ ವಸ್ತುವನ್ನು ಕೂಡ ಉಡುಗೊರೆಯಾಗಿ ನೀಡಬಹುದು. ಬೆಳ್ಳಿ ನೀಡಿದ್ರೆ ಲಕ್ಷ್ಮಿ ಸಂತೋಷಗೊಳ್ತಾಳೆ. ವಾಸ್ತು ಶಾಸ್ತ್ರದ ಪ್ರಕಾರ, ಬೆಳ್ಳಿಯು ಶುಕ್ರ ಗ್ರಹಕ್ಕೆ ನೇರವಾಗಿ ಸಂಬಂಧಿಸಿದೆ. ಶುಕ್ರನು ಬಲವಾಗಿದ್ದಾಗ ಲಕ್ಷ್ಮಿ ಅಲ್ಲಿ ನೆಲೆಸುತ್ತಾಳೆ.
ಕರ್ವಾ ಚೌತ್ ದಿನ ಸಂಗಾತಿಗೆ ಲಾಫಿಂಗ್ ಬುದ್ದನನ್ನು ಕೂಡ ನೀವು ನೀಡಬಹುದು. ಕೈನಲ್ಲಿ ಹಣವನ್ನು ಹಿಡಿದಿರುವ ಲಾಫಿಂಗ್ ಬುದ್ಧ ಹೆಚ್ಚು ಮಂಗಳಕರ. ಇದ್ರಿಂದ ಜೀವನದಲ್ಲಿ ಸಂತೋಷ, ಅದೃಷ್ಟ ಪ್ರಾಪ್ತಿಯಾಗುತ್ತದೆ.