ಅಸ್ಸಾಂನ ಧುಬ್ರಿ ಜಿಲ್ಲೆಯಲ್ಲಿ ಧಾರಾಕಾರ ಮಳೆಯ ನಡುವೆ ಅಸ್ಸಾಂ ಪೊಲೀಸ್ 20ನೇ ಬೆಟಾಲಿಯನ್ ಪೊಲೀಸರ ತರಬೇತಿಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಭಾರೀ ಮಳೆಯ ಅಬ್ಬರ ಲೆಕ್ಕಿಸದೇ ಪೊಲೀಸರು ಸಂಪೂರ್ಣ ಉತ್ಸಾಹ ಮತ್ತು ಸಮರ್ಪಣಾ ಭಾವದಿಂದ ‘1, 2,1, 2’ ಘೋಷಣೆಯೊಂದಿಗೆ ಮಾರ್ಚ್ ಪಾಸ್ಟ್ ಮಾಡುವುದನ್ನು ವಿಡಿಯೋದಲ್ಲಿ ಕಾಣಬಹುದು.
BIG NEWS: ಬೇವು ಬಿತ್ತಿ ಮಾವು ಬಯಸಲು ಸಾಧ್ಯವೇ……? ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಕುಟುಕಿದ ಬಿಜೆಪಿ
ಟ್ವಿಟರ್‌ನಲ್ಲಿ ವೀಡಿಯೊ ಹಂಚಿಕೊಂಡ ಅಸ್ಸಾಂ ವಿಶೇಷ ಡಿಜಿಪಿ (ಕಾನೂನು ಮತ್ತು ಸುವ್ಯವಸ್ಥೆ) ಜಿಪಿ ಸಿಂಗ್, “20ನೇ ಎಪಿಬಿಎನ್ ಧುಬ್ರಿಯಲ್ಲಿ ಮಳೆಯಲ್ಲೂ ತರಬೇತಿ” ಎಂದು ಶಿರ್ಷಿಕೆ ನೀಡಿದ್ದಾರೆ.
ಅಸ್ಸಾಂನಲ್ಲಿ ಪೊಲೀಸರು ಯಾವಾಗಲೂ ಮಳೆ, ಪ್ರವಾಹ ಮತ್ತು ಇತರ ಯಾವುದೇ ನೈಸರ್ಗಿಕ ವಿಕೋಪಗಳಲ್ಲಿ ಮೊದಲ ಪ್ರತಿಸ್ಪಂದಕರು. ಹೀಗಾಗಿ ಮಳೆಯ ನಡುವೆಯೂ ತರಬೇತಿ ನೀಡಲು ಈ ವ್ಯಾಯಾಮವನ್ನು ನಡೆಸಲಾಯಿತು.