ಭುವನೇಶ್ವರ: ಧೇನ್‌ಕನಲ್‌ನಲ್ಲಿ ತರಬೇತಿ ವಿಮಾನ ರನ್‌ವೇನಿಂದ ಜಾರಿ ಪಲ್ಟಿಯಾದ ಕಾರಣ, 24 ವರ್ಷದ ಟ್ರೇನಿ ಪೈಲಟ್ ಗಾಯಗೊಂಡ ಘಟನೆ ವರದಿಯಾಗಿದೆ. ಧೇನ್‌ಕಲ್‌ನ ಬಿರಾಸಾಲ್ ಏರ್‌ಸ್ಟ್ರಿಪ್‌ನಿಂದ ಸೆಸ್ನಾ 152 ವಿಮಾನವನ್ನು ಟೇಕಾಫ್ ಮಾಡುತ್ತಿದ್ದಾಗ ರನ್‌ವೇನಿಂದ 15 ಅಡಿ ಮೇಲೇರಿದ್ದಾಗ ವಿಮಾನ ಪಲ್ಟಿಯಾಗಿದೆ. ಸೋಮವಾರ ಅಪರಾಹ್ನ 2.30 ರಿಂದ 3 ಗಂಟೆ ನಡುವೆ ಈ ಅಪಘಾತ ಸಂಭವಿಸಿತ್ತು.
ಅತಿದೊಡ್ಡ ಟ್ರೇಡಿಂಗ್ ಮಿಸ್ಟೇಕ್ – ಬ್ರೋಕರ್ ಕಳೆದುಕೊಂಡದ್ದು ಬರೋಬ್ಬರಿ 250 ಕೋಟಿ ರೂಪಾಯಿ…..!
ಕಿರಣ್ ಮಲಿಕ್ ಎಂಬ ಯುವತಿ ಟ್ರೇನಿ ಪೈಲಟ್. ಈಕೆ ಮುಂಬೈನ ಸಿಯೋನ್ ಮೂಲದವರು. ಅವರು ಕಲಿಕೆಯ ಭಾಗವಾಗಿ ಒಂಟಿಯಾಗಿ ಸೆಸ್ನಾ ವಿಮಾನ ಹಾರಾಟ ನಡೆಸುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ. ಕಂಕದಹಾಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಲಿಕ್ ಅವರನ್ನು ಕಾಮಾಖ್ಯಾನಗರ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ. ರನ್‌ವೇ ಸಮೀಪದ ಚರಂಡಿಗೆ ವಿಮಾನ ಬಿದ್ದ ಕಾರಣ ವಿಮಾನದ ಪ್ರೊಪೆಲ್ಲರ್ ಮತ್ತು ಮುಂಭಾಗದ ಚಕ್ರಕ್ಕೆ ಹಾನಿಯಾಗಿದೆ ಎಂದು ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ನಿರ್ಮಲಾ ಗೋಚಾಯತ್ ತಿಳಿಸಿದ್ದಾರೆ.
ಈ ಹಿಂದೆ, 2020ರ ಜೂನ್ 8ರಂದು ಬಿರಾಸಾಲ್ ಏರ್‌ಸ್ಟ್ರಿಪ್ ಬಳಿ ಸೆಸ್ನಾ ತರಬೇತಿ ವಿಮಾನ 100 ಅಡಿ ಎತ್ತರದಿಂದ ಬಿದ್ದು, ಚೀಫ್ ಫ್ಲೈಯಿಂಗ್ ಇನ್‌ಸ್ಟ್ರಕ್ಟರ್ ಕ್ಯಾಪ್ಟನ್ ಸಂಜೀವ್ ಕುಮಾರ್ ಝಾ ಮತ್ತು ಟ್ರೇನಿ ಪೈಲಟ್ ಅನಿಸ್ ಫಾತಿಮಾ ಎಂ ಮೃತಪಟ್ಟಿದ್ದರು. ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್ (DGCA) ನಿಯಮಗಳ ಪ್ರಕಾರ, 350 ಗಂಟೆಗಳ ನೆಲದ ತರಬೇತಿ, 200 ಗಂಟೆಗಳ ಹಾರುವ ತರಬೇತಿ ಮತ್ತು ಎಲ್ಲ ಪರೀಕ್ಷೆಗಳು ಮತ್ತು ಚೆಕ್‌ಗಳಲ್ಲಿ ಉತ್ತೀರ್ಣರಾದರೆ ಮಾತ್ರವೇ ವಾಣಿಜ್ಯ ಪೈಲಟ್ ಪರವಾನಗಿಯನ್ನು ಪಡೆಯಲು ಸಾಧ್ಯ.