
ಮಧ್ಯಪ್ರದೇಶದ ಬಾಲಾಘಾಟ್ ನಲ್ಲಿ ಚಾರ್ಟರ್ಡ್ ವಿಮಾನ ಪತನವಾಗಿ ತರಬೇತಿ ನಿರತ ಮಹಿಳಾ ಪೈಲಟ್ ಮತ್ತು ವಿಮಾನದ ಇನ್ ಸ್ಟ್ರಕ್ಟರ್ ಸಾವನ್ನಪ್ಪಿದ್ದಾರೆ.
ಬಾಲಾಘಾಟ್‌ನ ಕಿರ್ನಾಪುರ ಬೆಟ್ಟಗಳ ಭಕ್ಕು ತೋಲಾ ಗ್ರಾಮದಲ್ಲಿ ವಿಮಾನ ಪತನಗೊಂಡಿರುವುದು ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಪಘಾತದ ಸ್ಥಳವನ್ನು ತಲುಪಿದ ಪೊಲೀಸರು ಎರಡು ಶವಗಳನ್ನು ವಶಪಡಿಸಿಕೊಂಡರು. ಒಬ್ಬರು ಟ್ರೈನಿ ಮಹಿಳಾ ಪೈಲಟ್ ರುಕ್ಷಾಂಕಾ ಮತ್ತು ವಿಮಾನದ ಬೋಧಕ ಮೋಹಿತ್ ಕುಮಾರ್ ಎಂದು ಗುರುತಿಸಲಾಗಿದೆ ಎಂದು ಬಾಲಘಾಟ್ ಪೊಲೀಸ್ ಅಧೀಕ್ಷಕ(ಎಸ್‌ಪಿ) ಸಮೀರ್ ಸೌರಭ್ ಹೇಳಿದ್ದಾರೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಮಹಾರಾಷ್ಟ್ರದ ಗೊಂಡಿಯಾ ಜಿಲ್ಲೆಯ ಬಿರ್ಸಿ ವಿಮಾನ ನಿಲ್ದಾಣದಿಂದ ಶನಿವಾರ ಮಧ್ಯಾಹ್ನ ವಿಮಾನ ಟೇಕಾಫ್ ಆಗಿದೆ. ಬಿರ್ಸಿ ಏರ್‌ಸ್ಟ್ರಿಪ್ ಕಂಟ್ರೋಲರ್ ಕಮಲೇಶ್ ಮೆಶ್ರಮ್ ಘಟನೆಯನ್ನು ದೃಢಪಡಿಸುವಾಗ, ಅವರ ಕೊನೆಯ ಸ್ಥಳವು ಬಾಲಘಾಟ್‌ನ ಕಿರ್ನಾಪುರದಲ್ಲಿ ಮಧ್ಯಾಹ್ನ 3.45 ರ ಸುಮಾರಿಗೆ ಪತ್ತೆಯಾಗಿದೆ. ಅಪಘಾತದ ಕಾರಣ ಇನ್ನೂ ತಿಳಿದುಬಂದಿಲ್ಲ. ಆದರೆ, ಶನಿವಾರದಂದು ಆಲಿಕಲ್ಲು ಚಂಡಮಾರುತವು ಕಾಣಿಸಿಕೊಂಡು ಪ್ರತಿಕೂಲ ಹವಾಮಾನದಿಂದಾಗಿ ಅಪಘಡ ಸಂಭವಿಸಿರಬಹುದು ಎಂದು ಹೇಳಿದರು.