alex Certify ಇನ್​ಸ್ಟಾಗ್ರಾಂ ಮೂಲಕ ಪರಿಚಯವಾದ ಗಗನಸಖಿ ಮೇಲೆ ಇಂಜಿನಿಯರಿಂಗ್‌ ವಿದ್ಯಾರ್ಥಿಯಿಂದ ಅತ್ಯಾಚಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇನ್​ಸ್ಟಾಗ್ರಾಂ ಮೂಲಕ ಪರಿಚಯವಾದ ಗಗನಸಖಿ ಮೇಲೆ ಇಂಜಿನಿಯರಿಂಗ್‌ ವಿದ್ಯಾರ್ಥಿಯಿಂದ ಅತ್ಯಾಚಾರ

ತರಬೇತಿ ಅವಧಿಯಲ್ಲಿದ್ದ ಗಗನಸಖಿ​ ಮೇಲೆ 22 ವರ್ಷದ ಯುವಕ ಅತ್ಯಾಚಾರಗೈದ ಘಟನೆಯೊಂದು ಬೆಳಕಿಗೆ ಬಂದಿದೆ. ಅಂದಹಾಗೆ ಈ ಆರೋಪಿ ಇನ್​ಸ್ಟಾಗ್ರಾಂ ಮೂಲಕ ಏರ್​ಹೋಸ್ಟಸ್​ ಜೊತೆ ಸಂಪರ್ಕ ಸಾಧಿಸಿದ್ದ ಎನ್ನಲಾಗಿದೆ.

ಇಂಜಿನಿಯರಿಂಗ್​ ವಿದ್ಯಾರ್ಥಿ ಆಗಿರುವ ಆರೋಪಿಯು ಸಂತ್ರಸ್ತೆಯ ಮೇಲೆ ಅತ್ಯಾಚಾರ ಎಸಗಿದ್ದು ಮಾತ್ರವಲ್ಲದೇ ಈ ದೃಶ್ಯಗಳನ್ನು ಚಿತ್ರೀಕರಿಸಿ ಆಕೆಗೆ ಬ್ಲಾಕ್​ಮೇಲ್​ ಮಾಡುತ್ತಾ ಅನೇಕ ಬಾರಿ ಲೈಂಗಿಕ ದೌರ್ಜನ್ಯ ಎಸಗಿದ್ದ ಎನ್ನಲಾಗಿದೆ.

ಈ ಸಂಬಂಧ ಸಂತ್ರಸ್ತೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಅಹಮದಾಬಾದ್​ನ ವೇಜಲ್ಪುರದಲ್ಲಿರುವ ನಿವಾಸದಿಂದ ಆರೋಪಿ ಅಜಿತ್​ ತ್ರಿವೇದಿಯನ್ನು ಬಂಧಿಸಲಾಗಿದೆ.

22 ವರ್ಷದ ಸಂತ್ರಸ್ತೆ ಕೂಡ ವೇಜಲ್ಪುರದ ನಿವಾಸಿಯಾಗಿದ್ದಾರೆ. ಈಕೆ ತ್ರಿವೇದಿ ಜೊತೆಗೆ 7 ತಿಂಗಳ ಹಿಂದೆ ಇನ್​ಸ್ಟಾಗ್ರಾಂನಲ್ಲಿ ಪರಿಚಯವಾಗಿದ್ದಳು. ಸೋಶಿಯಲ್​ ಮೀಡಿಯಾ ವೇದಿಕೆಯಲ್ಲಿ ಚಾಟ್​ ಮಾಡಿಕೊಳ್ಳುತ್ತಿದ್ದ ಇಬ್ಬರೂ ತಮ್ಮ ದೂರವಾಣಿ ಸಂಖ್ಯೆಯನ್ನೂ ಹಂಚಿಕೊಂಡಿದ್ದರು. ಮಾತ್ರವಲ್ಲದೇ ಭೇಟಿಯಾಗುವ ಬಗ್ಗೆ ದಿನಾಂಕ ಕೂಡ ಫಿಕ್ಸ್​ ಮಾಡಿದ್ದರು.

ಏಪ್ರಿಲ್​ ತಿಂಗಳಲ್ಲಿ ತ್ರಿವೇದಿ ಸಂತ್ರಸ್ತೆಯನ್ನು ತನ್ನ ಮನೆಗೆ ಆಹ್ವಾನಿಸಿದ್ದ. ಆಕೆಗೆ ಅಲ್ಲಿ ಅಮಲು ಪದಾರ್ಥ ಮಿಶ್ರಿತ ತಂಪು ಪಾನೀಯವನ್ನು ಕುಡಿಸಿದ್ದ. ಈ ತಂಪು ಪಾನೀಯ ಕುಡಿದ ಬಳಿಕ ಸಂತ್ರಸ್ತೆ ಪ್ರಜ್ಞೆ ತಪ್ಪಿದ್ದಳು. ಇದರ ಲಾಭ ಪಡೆದ ತ್ರಿವೇದಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದು ಮಾತ್ರವಲ್ಲದೇ ಸಂಪೂರ್ಣ ದೃಶ್ಯವನ್ನು ಚಿತ್ರೀಕರಿಸಿದ್ದನು. ಇದಾದ ಬಳಿಕ ಈ ವಿಡಿಯೋ ತೋರಿಸಿ ಆಕೆಗೆ ಬ್ಲಾಕ್​ ಮೇಲ್​ ಮಾಡುತ್ತಾ ಅನೇಕ ಬಾರಿ ಲೈಂಗಿಕ ಕಿರುಕುಳ ನೀಡಿದ್ದ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದು ಮಾತ್ರವಲ್ಲದೇ ದೈಹಿಕವಾಗಿ ಹಲ್ಲೆ ಕೂಡ ನಡೆಸಿದ್ದ ಎಂದು ದೂರಿನಲ್ಲಿ ಸಂತ್ರಸ್ತೆ ಹೇಳಿಕೊಂಡಿದ್ದಾಳೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...