
ಜನಸಂದಣಿ ನಡುವೆ ರೈಲು ಹತ್ತಲು ಹೋಗಿ ಮಹಿಳೆಯೊಬ್ಬರು ರೈಲಿನಿಂದ ಬಿದ್ದಿರುವ ಘಟನೆ ಮಹಾರಾಷ್ಟ್ರದ ಬದ್ಲಾಪುರ ರೈಲು ನಿಲ್ದಾಣದಲ್ಲಿ ನಡೆದಿದೆ.
ಬದ್ಲಾಪುರ ರೈಲು ನಿಲ್ದಾಣಕ್ಕೆ ಕರ್ಜತ್-ಮುಂಮೈ ಲೋಕಲ್ ರೈಲು ಆಗಮಿಸುತ್ತಿದ್ದಂತೆ ರೈಲು ಹತ್ತಲು ಏಕಾಏಕಿ ಪ್ರಯಾಣಿಕರು ದೌಡಾಯಿಸಿದ್ದಾರೆ. ರೈಲಿನ ಮೆಟ್ಟಿಲುಗಳ ಬಳಿ
ಕಿಕ್ಕಿರಿದು ಪ್ರಯಾಣಿಕರು ನಿಂತಿದ್ದರು. ಈ ವೇಳೆ ಜನರನ್ನು ತಳ್ಳಿಕೊಂಡು ಮಹಿಳೆಯೊಬ್ಬರು ರೈಲು ಹತ್ತಲು ಮುಂದಾಗಿದ್ದಾರೆ. ಮುಟ್ಟಿಲುಗಳ ಮೇಲೆ ಕಾಲಿಡುತಿದ್ದಂತೆ ನೂಕಾಟ
ತಳ್ಳಾಟ ನಡೆದು ಮಹಿಳೆ ಆಯತಪ್ಪಿ ಕೆಳಗೆ ಬಿದ್ದಿದ್ದಾಳೆ.
ಕೆಳಗೆ ಬಿದ್ದ ಮಹಿಳೆಯ ತಲೆಗೆ ಗಂಭೀರ ಗಾಯಗಳಾಗಿವೆ. ಕ್ಗಾಯಾಳು ಮಹಿಳೆಯನ್ನು ಕಲ್ಪನಾ ಜೇಡಿಯಾ ಎಂದು ಗುರುತಿಸಲಾಗಿದೆ. ಸದ್ಯ ಮಹಿಳೆಯನ್ನು ರಕ್ಷಿಸಿ ಸ್ಥಳೀಯ
ಆಸ್ಪತ್ರೆಗೆ ದಾಖಲಿಸಲಾಗಿದೆ.