
ಬೆಂಗಳೂರು: ರೈಲುಬರುವ ಸಮಯವನ್ನೂ ಗಮನಿಸದೇ ರೈಲ್ವೆ ಹಳಿ ದಾಟಲು ಹೋಗಿ ಯುವಕ ತನ್ನ ಒಂದು ಕಾಲು ಕಳೆದುಕೊಂಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರದಲ್ಲಿ ನಡೆದಿದೆ.
ಹೇಮಂತ್ ಕುಮಾರ್ ಕಾಲು ಕಳೆದುಕೊಂಡಿರುವ ಯುವಕ. ರೈಲು ಹಳಿ ದಾಟುತ್ತಿದ್ದ ವೇಳೆ ಏಕಾಏಕಿ ರೈಲು ಬಂದಿದ್ದು, ರೈಲಿನ ಅಡಿ ಯುವಕನ ಕಾಲು ಸಿಲುಕಿಕೊಂಡಿದೆ. ಒಂದು ಕಾಲನ್ನೇ ಯುವಕ ಕಳೆದುಕೊಂಡಿದ್ದಾರೆ. ಸದ್ಯ ಯುವಕನನ್ನು ರೈಲ್ವೆ ಸಿಬ್ಬಂದಿ ರಕ್ಷಿಸಿದ್ದು, ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಯಶವಂತಪುರ ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.