ರಾಯಚೂರು: ರೈಲಿಗೆ ಸಿಲುಕಿ ದಂಪತಿ, ಪುತ್ರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ರಾಯಚೂರು ತಾಲೂಕಿನ ಯರಮರಸ್ ಹೊರವಲಯದಲ್ಲಿ ನಡೆದಿದೆ.
ಸಮೀರ್ ಅಹಮದ್(44), ಜುಲೇಕಾ ಬೇಗಂ(40) ಮೃತಪಟ್ಟ ದಂಪತಿ ಎಂದು ಹೇಳಲಾಗಿದೆ. ಪುತ್ರಿ ಮೆಹಮೂನ್(21) ಸ್ಥಿತಿ ಗಂಭೀರವಾಗಿದ್ದು, ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ರೈಲ್ವೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.