alex Certify ರೈಲಿನಲ್ಲಿ ಸೀಟಿಗಾಗಿ ಗಲಾಟೆ; ಪ್ರಯಾಣಿಕರಿಗೆ ಚಾಕು ಇರಿದ ವ್ಯಕ್ತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೈಲಿನಲ್ಲಿ ಸೀಟಿಗಾಗಿ ಗಲಾಟೆ; ಪ್ರಯಾಣಿಕರಿಗೆ ಚಾಕು ಇರಿದ ವ್ಯಕ್ತಿ

ಬೆಂಗಳೂರು: ರೈಲಿನಲ್ಲಿ ಸೀಟಿನ ವಿಚಾರವಾಗಿ ಆರಂಭವಾದ ಗಲಾಟೆ ಚಾಕು ಇರಿಯುವ ಹಂತಕ್ಕೆ ತಲುಪಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ರೈಲ್ವೆ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ.

ಗಂಗಾಧರ್ ಹಾಗೂ ಯೋಗೇಶ್ ಹಲ್ಲೆಗೊಳಗಾದವರು. ಬೆಂಗಳೂರು-ಹಾಸನ ಮಾರ್ಗದ ರೈಲಿನಲ್ಲಿ ಇಬ್ಬರೂ ಪ್ರಯಾಣಿಸುತ್ತಿದ್ದರು. ಈ ವೇಳೆ ಫೋನ್ ನೆಟ್ ವರ್ಕ್ ಸಿಗುತ್ತಿಲ್ಲವೆಂದು ಗಂಗಾಧರ್, ತನ್ನ ಸ್ನೇಹಿತ ಯೋಗೇಶ್ ಗೆ ಸೀಟ್ ನೋಡಿಕೊಳ್ಳುವಂತೆ ಹೇಳಿ ರೈಲಿನ ಡೋರ್ ಬಳಿ ನಿಂತಿದ್ದರಂತೆ. ಈ ವೇಳೆ ನೆಲಮಂಗಲಕ್ಕೆ ರೈಲು ಬರುತ್ತಿದ್ದಂತೆ ಅಪರಿಚಿತ ವ್ಯಕ್ತಿಯೊಬ್ಬ ಗಂಗಾಧರ್ ಸೀಟ್ ನಲ್ಲಿ ಕುಳಿತುಕೊಳ್ಳಲು ಯತ್ನಿಸಿದ್ದಾನೆ. ಇದಕ್ಕೆ ಯೋಗೀಶ್ ಪ್ರಶ್ನಿಸಿದ್ದಾರೆ. ಮಾತಿಗೆ ಮಾತು ಆರಂಭವಾಗಿದೆ. ಗಲಾಟೆ ನಡೆಯುತ್ತಿದ್ದಂತೆ ಗಂಗಾಧರ್ ಕೂಡ ಸೀಟ್ ಬಳಿ ಬಂದಿದ್ದಾರೆ.

ಈ ವೇಳೆ ತರಕಾರಿ ಕತ್ತರಿಸುವ ಚಾಕುವನ್ನು ತೆಗೆದ ವ್ಯಕ್ತಿ ಇಬ್ಬರಿಗೂ ಚಾಕು ಇರಿದು ಪರಾರಿಯಾಗಿದ್ದಾನೆ. ನೆಲಮಂಗಲ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಾಗಿ ಪೊಲೀಸರು ಹುಡುಕಟ ನಡೆಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...