ಅಮೆಜಾನ್ ಡೆಲಿವರಿ ಚಾಲಕನೊಬ್ಬನ ಜನ್ಮದಿನದಂದೇ ಸಾವಿನ ದವಡೆಯಿಂದ ಪಾರಾಗಿರುವ ಘಟನೆ ನಡೆದಿದೆ. ಅದೃಷ್ಟವಶಾತ್ ಭೀಕರ ಅಪಘಾತವಾಗಿದ್ದರೂ ಆತ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಅಮೆರಿಕಾದ ವಿಸ್ಕಾನ್ಸಿನ್‌ನ ಮಿಲ್ವಾಕೀಯಲ್ಲಿ ಈ ಘಟನೆ ಸಂಭವಿಸಿದೆ.
ಅಲೆಕ್ಸಾಂಡರ್ ಇವಾನ್ಸ್ ಎಂಬ ಅಮೆಜಾನ್ ಡೆಲಿವರಿ ಡ್ರೈವರ್ ತನ್ನ 33ನೇ ಹುಟ್ಟುಹಬ್ಬದಂದು ಕೂಡ ಎಂದಿನಂತೆ ಉದ್ಯೋಗದಲ್ಲಿ ನಿರತನಾಗಿದ್ದ. ವಸ್ತುಗಳನ್ನು ಡೆಲಿವರಿ ಮಾಡುತ್ತಿದ್ದಾಗ ವೇಗವಾಗಿ ಬರುತ್ತಿದ್ದ ಆಮ್ಟ್ರಾಕ್ ರೈಲು ಈತನ ವ್ಯಾನ್ ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಕಾರು ಎರಡು ತುಂಡಾಗಿದೆ. ಅಪಘಾತದ ದೃಶ್ಯ ನೋಡಿ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.
ಇವಾನ್ಸ್ ಹಳಿ ದಾಟುವ ಮೊದಲು, ರೈಲು ಬರುತ್ತಿದೆಯೇ ಎಂದು ವೀಕ್ಷಿಸಿದ್ದಾನೆ. ರೈಲು ಬರುತ್ತಿಲ್ಲ ಎಂದು ಖಾತ್ರಿಪಡಿಸಿಕೊಂಡ ಚಾಲಕ ತನ್ನ ವಾಹನವನ್ನು ಹಳಿ ಮೇಲೆ ಚಲಾಯಿಸಿದ್ದಾನೆ. ಆದರೆ, ರೈಲು ಬರುತ್ತಿರುವುದು ಚಾಲಕನ ಗಮನಕ್ಕೆ ಬಂದಿಲ್ಲ. ಎಡಕಿವಿ ಕಿವುಡಾಗಿರುವುದರಿಂದ ಮೊದಲಿಗೆ ರೈಲಿನ ಹಾರ್ನ್ ಕೇಳಿಸಲಿಲ್ಲ.
ಆದರೆ, ರೈಲು ಹತ್ತಿರಬರುತ್ತಿದ್ದಂತೆ, ಎಷ್ಟು ವೇಗವಾಗಿ ವ್ಯಾನ್ ಅನ್ನು ಓಡಿಸಲಾಗುತ್ತೋ ಅಷ್ಟು ಪ್ರಯತ್ನ ಪಟ್ಟಿದ್ದಾನೆ. ಆದರೆ ವೇಗವಾಗಿ ಬಂದ ರೈಲು ವಾಹನವನ್ನು ಎರಡು ಭಾಗಗಳಾಗಿ ತುಂಡಾಗಿದೆ. ಘಟನೆಯ ಕುರಿತು ಮಾತನಾಡಿದ ಇವಾನ್ಸ್, ತನಗೆ ಈಗಲೂ ನಂಬಲಾಗುತ್ತಿಲ್ಲ ಎಂದು ಹೇಳಿದ್ದಾನೆ.
ಇನ್ನು ರೈಲು ಹಳಿಗಳನ್ನು ದಾಟುವಾಗ ಎಚ್ಚರಿಕೆಯ ಸಂಕೇತಗಳು, ಗೇಟ್, ದೀಪಗಳು ಮತ್ತು ಗೋಚರ ಚಿಹ್ನೆಗಳ ಬದಲಾವಣೆ ಮಾಡಬೇಕಾಗಿದೆ. ಇದು ನಾಗರಿಕರನ್ನು ರಕ್ಷಿಸಲು ಸಹಾಯ ಮಾಡುತ್ತದೆ. ತನ್ನ ಗಂಡನ ಜೀವ ಅತ್ಯಮೂಲ್ಯವಾಗಿದೆ ಎಂದು ಇವಾನ್ಸ್ ಪತ್ನಿ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾಳೆ.