ವಾಯವ್ಯ ಬಾಂಗ್ಲಾದೇಶದಲ್ಲಿ ಫೆ.12ರಂದು ಎಕ್ಸ್‌ಪ್ರೆಸ್ ರೈಲು ದುರಂತಕ್ಕೆ ತುತ್ತಾಗಿ ನೂರಾರು ಪ್ರಯಾಣಿಕರು ಸಾವಿನ ದವಡೆಯಲ್ಲಿ ಸಿಲುಕುವುದು ತಪ್ಪಿದೆ.
300 ಪ್ರಯಾಣಿಕರಿಂದ ತುಂಬಿದ್ದ ಉತ್ತರಾ ಛಿಲ್‌ಗಟಿ ಎಕ್ಸ್‌ಪ್ರೆಸ್ ರೈಲು ರಾಜ್‌ಶಾಹಿ ಜಿಲ್ಲೆಯಲ್ಲಿ ಸಂಚರಿಸುವಾಗ ಅಲರ್ಟ್ ಆದ ಗೇಟ್‌ಮ್ಯಾನ್ ಮುನ್ನೆಚ್ಚರಿಕೆಯಿಂದ ಕುಸಿದ ಸೇತುವೆಗೆ ರೈಲು ಬೀಳುವುದು ತಪ್ಪಿಸಲಾಗಿದೆ.
ಬೊರಲ್ ರೈಲ್ವೆ ಸೇತುವೆ ಬಳಿ ಒಂದು ಸರಕು ಸಾಗಣೆ ರೈಲು ಹಳಿಯಲ್ಲಿ ಸಾಗಿದ ಕೆಲವೇ ಕ್ಷಣಗಳ ನಂತರ ಸೇತುವೆಯು ಏಕಾಏಕಿಯಾಗಿ ಕುಸಿದಿತ್ತು. ಮಣ್ಣು ಸಡಿಲಗೊಂಡ ಪರಿಣಾಮ ಸೇತುವೆಯ ಕೆಳಭಾಗದ ಪೂರ್ಣವಾಗಿ ಜಾರಿ ಹೋಗಿತ್ತು.
BIG BREAKING: ಚೀನಾಗೆ ಭಾರತದಿಂದ ಮತ್ತೊಂದು ಶಾಕ್, ಮತ್ತೆ 54 ಚೀನೀ ಅಪ್ಲಿಕೇಶನ್ ನಿಷೇಧ
ಇನ್ನೇನು ಕೆಲವೇ ಕ್ಷಣಗಳಲ್ಲಿ ಆ ಸ್ಥಳಕ್ಕೆ ಎಕ್ಸ್‌ಪ್ರೆಸ್ ರೈಲು ಬರುತ್ತಲಿತ್ತು. ಕೂಡಲೇ ಜಾಗರೂಕರಾಗಿ ಮಣ್ಣು ಕುಸಿತ, ಸೇತುವೆ ಭಗ್ನಗೊಂಡಿರುವುದನ್ನು ಗಮನಿಸಿದ ಲಯೇಬುದ್ದೀನ್ ಎಂಬ ಗೇಟ್‌ಮ್ಯಾನ್ ಸಮೀಪದ ಸ್ಟೇಷನ್ ಮಾಸ್ಟರ್‌ಗೆ ವಿಷಯ ಮುಟ್ಟಿಸಿದ.
ರಾಜಶಾಹಿ ಜಿಲ್ಲೆಯ ಅರಾನಿ ರೈಲು ನಿಲ್ದಾಣದ ವ್ಯಾಪ್ತಿಯಲ್ಲಿ ಸಂಭಾವ್ಯ ದುರಂತ ತಪ್ಪಿಸಲು ಸ್ಟೇಷನ್ ಮಾಸ್ಟರ್ ಸದ್ರುಲ್ ಅಲಾಮ್ ತುರ್ತು ಪರಿಸ್ಥಿತಿಯ ಎಚ್ಚರಿಕೆ ಸಂದೇಶವನ್ನು ರವಾನಿಸಿದರು.
ಸೇತುವೆಯಿಂದ ಸ್ವಲ್ಪ ದೂರದಲ್ಲಿ ಪ್ಯಾಸೆಂಜರ್ ರೈಲು ಇದ್ದಾಗಲೇ ಕೆಂಪು ಬಾವುಟ ತೋರಿಸಿದ ಗೇಟ್‌ಮ್ಯಾನ್, 300 ಪ್ರಯಾಣಿಕರ ಜೀವ ಉಳಿಸಿದ. ರೈಲಿನ ಚಾಲಕನಿಗೆ ಕೆಂಪು ಬಾವುಟ ಕಾಣಿಸಿದ್ದು ಮತ್ತು ಸ್ಟೇಷನ್ ಮಾಸ್ಟರ್‌ರಿಂದ ತುರ್ತು ಎಚ್ಚರಿಕೆ ಸಂದೇಶ ಸಿಕ್ಕಿದ್ದು ಜನರ ಪ್ರಾಣ ರಕ್ಷಣೆಗೆ ನೆರವಾಗಿದೆ.