
ಬೆಂಗಳೂರು: ಬೆಂಗಳೂರು-ತುಮಕೂರು ಮಾರ್ಗದಲ್ಲಿ ರಸ್ತೆ, ರೈಲು ಮೂಲಕ ಸಂಚರಿಸುವವರಿಗೆ ಮುಖ್ಯವಾದ ಮಾಹಿತಿ ಇಲ್ಲಿದೆ.
ಯಶವಂತಪುರಕ್ಕೆ ಮತ್ತು ಅಲ್ಲಿಂದ ಬರುವ ಐಆರ್ ರೈಲು ಸೇವೆಗಳು ಆಗಸ್ಟ್ 21 ರಿಂದ ಸೆಪ್ಟೆಂಬರ್ 19 ರವರೆಗೆ ಸ್ಥಗಿತಗೊಳ್ಳಲಿವೆ.
ಮೆಟ್ರೋ ಸೇವೆಗಳು b/w ಪೀಣ್ಯ ಇಂಡಸ್ಟ್ರಿ ಮತ್ತು ನಾಗಸಂದ್ರದಲ್ಲಿ ಆಗಸ್ಟ್ 20 ರಿಂದ ಸೆಪ್ಟೆಂಬರ್ 11 ರವರೆಗೆ ಸ್ಥಗಿತಗೊಳ್ಳಲಿದೆ
ಪೀಣ್ಯ ಮೇಲ್ಸೇತುವೆ ಶುಕ್ರವಾರ ಬೆಳಗ್ಗೆ 6ರಿಂದ ಶನಿವಾರ ಬೆಳಗ್ಗೆ 6ರವರೆಗೆ ಹೆಚ್‌ಎಂವಿಗಳಿಗೆ ಬಂದ್ ಆಗಲಿದೆ.
ರೈಲು ಸೇವೆಗಳಲ್ಲಿ ಬದಲಾವಣೆ
2024ರ ಆಗಸ್ಟ್ 21 ರಿಂದ ಸೆಪ್ಟೆಂಬರ್ 4 ರವರೆಗೆ 15 ದಿನಗಳವರೆಗೆ ಪ್ಲಾಟ್‌ಫಾರ್ಮ್ ಸಂಖ್ಯೆ 2 ಮತ್ತು 3 ಅನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ. ಮತ್ತು ಪ್ಲಾಟ್‌ಫಾರ್ಮ್ ಸಂಖ್ಯೆಗಳು 4 ಮತ್ತು 5 ಅನ್ನು ಸೆಪ್ಟೆಂಬರ್ 5 ರಿಂದ 19, 2024 ರವರೆಗೆ 15 ದಿನಗಳವರೆಗೆ ಯಶವಂತಪುರದಲ್ಲಿ ಏರ್ ಕಾನ್ಕೋರ್ಸ್‌ಗೆ ಅಡಿಪಾಯದ ನಿರ್ಮಾಣದ ಕಾರಣದಿಂದ ಬಂದ್ ಮಾಡಲಾಗಿದೆ. ವಿವಿಧ ರೈಲು ಸೇವೆಗಳನ್ನು ರದ್ದುಗೊಳಿಸಲಾಗುತ್ತದೆ. ಕೆಲವು ರೈಲು ಭಾಗಶಃ ರದ್ದುಗೊಳಿಸಲಾಗುತ್ತದೆ. ಮತ್ತೆ ಕೆಲವು ರೈಲುಗಳ ಮಾರ್ಗದಲ್ಲಿ ಬದಲಾವಣೆ ಮರುಹೊಂದಿಸಲಾಗುತ್ತದೆ.
ಮೆಟ್ರೋ ಸೇವೆಯಲ್ಲಿ ವ್ಯತ್ಯಯ
ಬೆಂಗಳೂರು ನಮ್ಮ ಮೆಟ್ರೋ ಹಸಿರು ಮಾರ್ಗದ ನಾಗಸಂದ್ರ ಮತ್ತು ರೇಷ್ಮೆ ಸಂಸ್ಥೆ ನಡುವೆ ಮೆಟ್ರೋ ರೈಲು ಸೇವೆಯಲ್ಲಿ ವ್ಯತ್ಯಯವಾಗಲಿದೆ.
ವಿಸ್ತರಿಸಿದ ಹಸಿರು ಮಾರ್ಗದ ನಾಗಸಂದ್ರದಿಂದ ಮಾದವರ ನಡುವೆ ಸಿಗ್ನಲಿಂಗ್ ಸಂಬಂಧಿತ ಪರೀಕ್ಷೆಯನ್ನು ಮುಂದುವರಿಸಲು ಕೆಲವು ದಿನಗಳೆಂದು ರೈಲು ಸೇವೆಯ ಸಮಯ ಮತ್ತು ಕಾರ್ಯಾಚರಣೆಗಳಲ್ಲಿ ಬದಲಾವಣೆಯಾಗಲಿದೆ.
ದಿನಾಂಕ 20, 23, 30ನೇ ಆಗಸ್ಟ್ 2024 ಹಾಗೂ 6 ಮತ್ತು 11ನೇ ಸೆಪ್ಟೆಂಬರ್ 2024 ರಂದು ಪೂರ್ಣ ದಿನ ರೈಲು ಸೇವೆಗಳನ್ನು ಸ್ಥಗಿತಗೊಳಿಸಲಾಗುತ್ತದೆ.
ನಾಗಸಂದ್ರ ಮೆಟ್ರೋ ನಿಲ್ದಾಣದಿಂದ ಪೀಣ್ಯ ಇಂಡಸ್ಟ್ರಿ ಕಡೆಗೆ:
ಆಗಸ್ಟ್ 24 ರಂದು ಕೊನೆಯ ರೈಲು ಸೇವೆಯು ರಾತ್ರಿ 11.05 ಕ್ಕೆ ಬದಲಾಗಿ 10.00 ಗಂಟೆಗೆ ಪ್ರಾರಂಭವಾಗಲಿದೆ.
ಆಗಸ್ಟ್ 25 ರಂದು ಮೊದಲ ರ್ರೈಲು ಸೇವೆಯು ಬೆಳಿಗ್ಗೆ 5 ಕ್ಕೆ ಬದಲಾಗಿ 6 ಗಂಟೆಗೆ ಪ್ರಾರಂಭವಾಗಲಿದೆ.
ಪೀಣ್ಯ ಇಂಡಸ್ಟ್ರಿಯಿಂದ ರೇಷ್ಮೆ ಸಂಸ್ಥೆ ಮೆಟ್ರೋ ನಿಲ್ದಾಣದ ಕಡೆಗೆ:
ಆಗಸ್ಟ್ 24 ರಂದು ಕೊನೆಯ ರೈಲು ಸೇವೆಯು ರಾತ್ರಿ 11.12 ಕ್ಕೆ ಪ್ರಾರಂಭವಾಗಲಿದೆ.
ಆಗಸ್ಟ್ 25 ರಂದು ಮೊದಲ ರೈಲು ಸೇವೆಯು ಬೆಳಿಗ್ಗೆ 5 ಗಂಟೆಗೆ ಪ್ರಾರಂಭವಾಗಲಿದೆ.
ನೇರಳ ಮಾರ್ಗದ ಮೆಟ್ರೋ ಸೇವೆಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.
ಪೀಣ್ಯ ಮೇಲ್ಸೇತುವೆ ಸಂಚಾರ
ದಿನಾಂಕ 29.07.2024 ರಿಂದ ಎಲಿವೇಟೆಡ್ ಫ್ಲೈಓವರ್‌ನಲ್ಲಿ ಎಲ್ಲಾ ರೀತಿಯ ವಾಹನಗಳನ್ನು ಓಡಿಸಲು ಅನುಮತಿಸಲಾಗಿದೆ.
ಎಲಿವೇಟೆಡ್ ಫ್ಲೈಓವರ್‌ನಲ್ಲಿ ವಿಶೇಷ ದುರಸ್ತಿ ಕಾರ್ಯವು ಪ್ರಗತಿಯಲ್ಲಿರುವ ಕಾರಣ, ಈ ನಿಟ್ಟಿನಲ್ಲಿ ಪ್ರತಿ ಶುಕ್ರವಾರ ಬೆಳಗ್ಗೆ 6 ರಿಂದ ಶನಿವಾರ ಬೆಳಗ್ಗೆ 6 ಗಂಟೆವರೆಗೆ ಎಲಿವೇಟೆಡ್ ಫ್ಲೈಓವರ್‌ನಲ್ಲಿ ಭಾರೀ ಮೋಟಾರು ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ.
ಹೆವಿ ಮೋಟಾರು ವಾಹನಗಳು ಎಡಭಾಗದ ಲೇನ್‌ನಲ್ಲಿ ಚಲಿಸಬೇಕು ಮತ್ತು ಎಲಿವೇಟೆಡ್ ಫ್ಲೈಓವರ್‌ನಲ್ಲಿ ಗಂಟೆಗೆ 40 ಕಿಮೀ ವೇಗದ ಮಿತಿಯನ್ನು ನಿರ್ಬಂಧಿಸಲಾಗಿದೆ.



