alex Certify ಮುಂಬೈ ಲೋಕಲ್ ರೈಲುಗಳಲ್ಲಿ ‘ಯೋಗ ದಿನಾಚರಣೆ’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮುಂಬೈ ಲೋಕಲ್ ರೈಲುಗಳಲ್ಲಿ ‘ಯೋಗ ದಿನಾಚರಣೆ’

ಜೂನ್ 21 ಬಂತೆಂದರೆ ಇಡೀ ಜಗತ್ತಿನೆಲ್ಲೆಡೆ ಯೋಗದ ಸಂಭ್ರಮ ಮನೆ ಮಾಡುತ್ತದೆ. ಇದು ಕಳೆದ 8 ವರ್ಷಗಳಿಂದ ನಡೆದುಕೊಂಡು ಬಂದಿರುವ ಆಚರಣೆ. ಈ ವರ್ಷದ ಯೋಗ ದಿನದಂದು ಪ್ರಧಾನಿ ನರೇಂದ್ರ ಮೋದಿಯವರು ರಾಜ್ಯದ ಸಾಂಸ್ಕೃತಿಕ ನಗರ ಮೈಸೂರಿನ ವಿಶ್ವವಿಖ್ಯಾತ ಅರಮನೆ ಆವರಣದಲ್ಲಿ ಸಾವಿರಾರು ಜನರೊಂದಿಗೆ ಸೇರಿ ಯೋಗಾಭ್ಯಾಸವನ್ನು ಮಾಡಿ ಗಮನಸೆಳೆದರು. ಕಚೇರಿಗಳು, ಕಾರ್ಪೊರೇಟ್ ಸಂಸ್ಥೆಗಳು, ಶಾಲಾ ಕಾಲೇಜುಗಳಲ್ಲಿ ಯೋಗ ದಿನವನ್ನು ಆಚರಿಸಲಾಯಿತು.

ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಮುಂಬೈ ನಾಗರಿಕರು ರೈಲಿನಲ್ಲಿ ಪ್ರಯಾಣದ ವೇಳೆಯೇ ಯೋಗಾಭ್ಯಾಸ ಮಾಡಿ ಯೋಗದ ಮಹತ್ವವನ್ನು ಸಾರಿದ್ದಾರೆ. ಮುಂಬೈನ ಸ್ಥಳೀಯ ರೈಲುಗಳಲ್ಲಿ `ಹೀಲ್ ಸ್ಟೇಷನ್’ ಎಂಬ ಸಂಸ್ಥೆಯ 100 ಕ್ಕೂ ಹೆಚ್ಚು ಯೋಗ ತರಬೇತುದಾರರು ರೈಲಿನ ಪ್ರಯಾಣಿಕರಿಗೆ ಮಂಗಳವಾರ ರೈಲಿನಲ್ಲಿಯೇ ಯೋಗಾಭ್ಯಾಸವನ್ನು ಹೇಳಿಕೊಟ್ಟಿದ್ದಾರೆ.

BIG BREAKING: ʼಮಹಾʼ ಬಿಕ್ಕಟ್ಟಿನ ನಡುವೆ ಆಸ್ಪತ್ರೆಗೆ ದಾಖಲಾದ ರಾಜ್ಯಪಾಲರು

ಪಶ್ಚಿಮ ರೈಲ್ವೆ ವಿಭಾಗದ ಅನುಮತಿ ಪಡೆದ ಈ ಸಂಸ್ಥೆಯು 2017 ರಲ್ಲಿ ರೈಲುಗಳಲ್ಲಿ ಪ್ರಯಾಣಿಕರಿಗೆ ಯೋಗ ಹೇಳಿಕೊಡುವ ಮೂಲಕ ಯೋಗ ದಿನವನ್ನು ಆಚರಿಸಿತ್ತು. ಈ ಬಾರಿಯೂ ಅನುಮತಿ ಪಡೆದ ಸಂಸ್ಥೆಯ 100 ಯೋಗ ಶಿಕ್ಷಕರು ಯೋಗಾಭ್ಯಾಸ ನಡೆಸಿಕೊಟ್ಟರು.

ಸ್ವತಃ ಯೋಗ ತರಬೇತುದಾರರೂ ಆಗಿರುವ ಮುಂಬೈ ಮೂಲದ ಪತ್ರಕರ್ತೆ ರುಚಿತಾ ಶಾ ಅವರು ರೈಲಿನಲ್ಲಿ ಪ್ರಯಾಣಿಕರಿಗೆ ಯೋಗ ಹೇಳಿಕೊಡಬೇಕೆಂಬುದು ಅವರ ಕನಸಿನ ಕೂಸಾಗಿತ್ತು. ಅದು ಸಾಕಾರವಾಗಿದ್ದು, ಹೀಲ್ ಸ್ಟೇಷನ್ ಶಿಕ್ಷಕರ ಸಹಕಾರದಿಂದ ಅನೇಕ ಪ್ರಯಾಣಿಕರಿಗೆ ಯೋಗವನ್ನು ಹೇಳಿಕೊಡಲಾಗಿದೆ.

ಈ ಯೋಗಾಭ್ಯಾಸದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಮೆಚ್ಚುಗೆಯೂ ವ್ಯಕ್ತವಾಗಿದೆ. ಅದೇ ರೀತಿ ಪಶ್ಚಿಮ ರೈಲ್ವೆಯೂ ಸಹ ಈ ಫೋಟೋಗಳನ್ನು ಹಂಚಿಕೊಂಡಿದ್ದು, ಪಶ್ಚಿಮ ರೈಲ್ವೆ ಮತ್ತು ಹೀಲ್ ಸ್ಟೇಷನ್ ಸಹಭಾಗಿತ್ವದಲ್ಲಿ ಅಂತಾರಾಷ್ಟ್ರೀಯ ಯೋಗ ದಿನವನ್ನು ಲೋಕಲ್ ಟ್ರೈನ್ ಗಳಲ್ಲಿ ಆಯೋಜಿಸಲಾಗಿತ್ತು. ಇದರಲ್ಲಿ ಪಾಲ್ಗೊಂಡ ಪ್ರಯಾಣಿಕರು ಯೋಗಾಭ್ಯಾಸ ಮಾಡಿದರು ಎಂದು ಪಶ್ಚಿಮ ರೈಲ್ವೆ ತಿಳಿಸಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...