ಬೆಂಗಳೂರು: ತಂದೆಯಿಂದಲೇ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಬಾಲಕಿಯೊಬ್ಬಳು ಮನೆ ಬಿಟ್ಟು ಬೆಂಗಳೂರು ತಲುಪಿದ್ದಾಳೆ.
ಬೆಂಗಳೂರು ವಿಭಾಗದ ರೈಲ್ವೆ ಸಂರಕ್ಷಣಾ ಪಡೆಯ ಮಹಿಳಾ ಶಕ್ತಿ ವಿಶೇಷ ತಂಡವು ರೈಲೊಂದರಲ್ಲಿದ್ದ ಬಾಲಕಿಯನ್ನು ರಕ್ಷಣೆ ಮಾಡಿದ್ದಾರೆ. ಆಕೆಯನ್ನು ವಿಚಾರಣೆ ನಡೆಸಿದಾಗ ಬಿಹಾರದ ಪೂರ್ವ ಚಂಪಾರಣ್ಯ ಮೋತಿಹಾರಿ ಪ್ರದೇಶದ ನಿವಾಸಿಯಾಗಿರುವ ಆಕೆ ತಂದೆಯಿಂದಲೇ ಪದೇ ಪದೇ ಲೈಂಗಿಕ ಕಿರುಕುಳದಿಂದ ಬೇಸರಗೊಂಡು ಮನೆ ಬಿಟ್ಟು ಬಂದಿರುವುದು ಗೊತ್ತಾಗಿದೆ.
ಬೆಂಗಳೂರಿಗೆ ಆಗಮಿಸಿದ ರೈಲಿನಲ್ಲಿದ್ದ ಬಾಲಕಿಯನ್ನು ಮಹಿಳಾ ಶಕ್ತಿ ಕಂಡ ರಕ್ಷಣೆ ಮಾಡಿ ಬೆಂಗಳೂರು ಸಿಟಿ ರೈಲ್ವೆ ನಿಲ್ದಾಣದ ಆರ್.ಪಿ.ಎಫ್. ಪೋಸ್ಟ್ ನ ಮಕ್ಕಳ ಸ್ನೇಹಿ ಸ್ಥಳಕ್ಕೆ ಕರೆತರಲಾಗಿದೆ. ನಂತರ ಬಾಲಕಿಗೆ ಹೆಚ್ಚಿನ ಸಂರಕ್ಷಣೆ ಮತ್ತು ಅಗತ್ಯ ಕ್ರಮ ಕೈಗೊಳ್ಳಲು ಬಾಸ್ಕೋ ಚೈಲ್ಡ್ ಕೇರ್ ಗೆ ಕಳುಹಿಸಲಾಗಿದೆ. ಆಕೆ ಸುರಕ್ಷಿತವಾಗಿದ್ದಾಳೆ. ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ ಎಂದು ಹೇಳಲಾಗಿದೆ.