ಬೆಂಗಳೂರು: ರಾಜ್ಯದಲ್ಲಿ ಶುಕ್ರವಾರ ರಾತ್ರಿ 9 ಗಂಟೆಯಿಂದ ಸೋಮವಾರ ಬೆಳಿಗ್ಗೆ 6 ಗಂಟೆಯವರೆಗೆ ವಾರಾಂತ್ಯ ಕರ್ಫ್ಯೂ ಜಾರಿಯಲ್ಲಿದ್ದರೂ ರೈಲು ಸಂಚಾರದಲ್ಲಿ ಯಥಾಸ್ಥಿತಿ ಇರುತ್ತದೆ.
ರಾಜ್ಯಾದ್ಯಂತ ಮತ್ತು ಹೊರರಾಜ್ಯಕ್ಕೆ ಸಂಚರಿಸುವ ರೈಲುಗಳ ಸಂಚಾರ ಎಂದಿನಂತೆ ಇರುತ್ತವೆ. ಇವುಗಳೊಂದಿಗೆ ಕೆಲವು ವಿಶೇಷ ರೈಲುಗಳ ಸಂಚಾರ ಇರುತ್ತದೆ ಎಂದು ನೈಋತ್ಯ ರೈಲ್ವೆ ಬೆಂಗಳೂರು ವಿಭಾಗದಿಂದ ಮಾಹಿತಿ ನೀಡಲಾಗಿದೆ.
ಅಂತರರಾಜ್ಯ ರೈಲುಗಳಲ್ಲಿ ವೇಯ್ಟಿಂಗ್ ಲಿಸ್ಟ್ ನಲ್ಲಿರುವ ಪ್ರಯಾಣಿಕರಿಗೆ ಪ್ರಯಾಣಕ್ಕೆ ಅವಕಾಶ ಇರುವುದಿಲ್ಲ. ವೇಯ್ಟಿಂಗ್ ಲಿಸ್ಟ್ ನಲ್ಲಿರುವ ಅಂತರಾಜ್ಯ ಪ್ರಯಾಣಿಕರು ನಿಲ್ದಾಣಕ್ಕೆ ಬರಬಾರದು. ರೈಲು ಹೊರಡುವ 30 ನಿಮಿಷಕ್ಕೆ ಮೊದಲು ಟಿಕೆಟ್ ರದ್ದುಮಾಡಿ ಹಣ ಮರುಪಾವತಿ ಪಡೆದುಕೊಳ್ಳಬಹುದು ಎಂದು ಹೇಳಲಾಗಿದೆ.