
ಭೋಪಾಲ್: ರೈಲ್ವೆ ಹಳಿಮೇಲೆ ಕುಳಿತು ಹೆಡ್ ಫೋನ್ ಹಾಕಿಕೊಂಡು ಮೊಬೈಲ್ ನೋಡುವುದರಲ್ಲಿ ತಲ್ಲೀನನಾಗಿದ್ದ ವಿದ್ಯಾರ್ಥಿಯೊಬ್ಬ ರೈಲು ಡಿಕ್ಕಿ ಹೊಡೆದು ಸಾವನ್ನಪ್ಪಿರುವ ದಾರುಣ ಘಟನೆ ಮಧ್ಯಪ್ರದೇಶದ ಭೋಪಾಲ್ ನಲ್ಲಿ ನಡೆದಿದೆ.
20 ವರ್ಷದ ಬಿಬಿಎ ವಿದ್ಯಾರ್ಥಿ ಮನ್ರಾಜ್ ತೋಮರ್ ಮೃತ ವಿದ್ಯಾರ್ಥಿ. ಮನ್ರಾಜ್ ತನ್ನ ಸ್ನೇಹಿತನ ಜೊತೆ ರೈಲ್ವೆ ಹಳಿ ಮೇಲೆ ಕುಳಿತಿದ್ದ. ಈ ವೇಳೆ ಮನ್ರಾಜ್ ಹೆಡ್ ಫೋನ್ ಹಾಕಿ ಮೊಬೈಲ್ ನೋಡುತ್ತಿದ್ದ. ರೈಲು ಬಂದಿದ್ದು ಆತನಿಗೆ ಗೊತ್ತಾಗಿಲ್ಲ. ರೈಲು ಡಿಕ್ಕಿ ಹೊಡೆದು ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಮನ್ರಾಜ್ ಪೋಷಕರಿಗೆ ಒಬ್ಬನೇ ಮಗನಾಗಿದ್ದು, ಏಕೈಕ ಮಗನನ್ನು ಕಳೆದುಕೊಂಡ ತಂದೆ-ತಾಯಿ ಆಕ್ರಂದನ ಮುಗಿಲುಮುಟ್ಟಿದೆ.