ಸುರೇಶ್ ರಾಜು ನಿರ್ದೇಶನದ ಅನ್ವಿಶ್ ಅಭಿನಯದ ‘ಸ್ವೇಚ್ಚಾ’ ಚಿತ್ರದ ಟ್ರೈಲರ್ ಇಂದು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದೆ. ಈ ಟ್ರೈಲರ್ ನೋಡುಗರಲ್ಲಿ ಸಾಕಷ್ಟು ಕುತೂಹಲ ಮೂಡಿಸಿದ್ದು, ಮೆಚ್ಚುಗೆಯ ಮಹಾಪೂರವೇ ಹರಿದು ಬಂದಿದೆ.
ಈ ಚಿತ್ರವನ್ನು ಸ್ಟಾರ್ ಮಸ್ತಾನ್ ಬ್ಯಾನರ್ ನಲ್ಲಿ ನಿರ್ಮಾಣ ಮಾಡಲಾಗಿದ್ದು, ಸೇರಿದಂತೆ ಪವಿತ್ರ ನಾಯಕ್, ಸ್ಪಂದನಾ, ಬೇಬಿ ಶ್ರೀ, ಕೆ.ಆರ್. ಮುರಹರಿ ರೆಡ್ಡಿ, ಪ್ರಕಾಶ್, ರೇವಣ್ಣ, ಸುರೇಶ್ ರೆಡ್ಡಿ, ಆರ್ ಯಶ್ ಯಲ್ಲಾಲಿಂಗ್, ಮಾಲಾಶ್ರೀ, ವಿನಯ್ ದೇವರಾಜ್ ಬಣ್ಣ ಹಚ್ಚಿದ್ದಾರೆ. ಲೋಕಿ ತವಸ್ಯ ಸಂಗೀತ ನಿರ್ದೇಶನ ಮಾಡಿದ್ದು, ಸುರೇಶ್ ರೆಡ್ಡಿ ಸಂಭಾಷಣೆ, ಪವನ್ ಬಿಕೆ ಸಂಕಲನ, ಸಿ.ಎಸ್. ಸತೀಶ್ ಛಾಯಾಗ್ರಹಣ. ಹಾಗೂ ಸುರೇಶ್ ರಾಜು ಅವರ ನೃತ್ಯ ನಿರ್ದೇಶನವಿದೆ.