alex Certify ‘ಗಜರಾಮ’ ಚಿತ್ರದ ಟ್ರೈಲರ್ ರಿಲೀಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಗಜರಾಮ’ ಚಿತ್ರದ ಟ್ರೈಲರ್ ರಿಲೀಸ್

‘ಬಿಚ್ಚುಗತ್ತಿ’ ಖ್ಯಾತಿಯ ರಾಜ್ ವರ್ಧನ್ ಅಭಿನಯದ ಬಹು ನಿರೀಕ್ಷಿತ ‘ಗಜರಾಮ’ ಚಿತ್ರದ ಟ್ರೈಲರ್ ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದೆ. ಈ ಟ್ರೈಲರ್ ಕೆಲವೇ ಕ್ಷಣಗಳಲ್ಲಿ ಸಾಕಷ್ಟು ವೀಕ್ಷಣೆ ಪಡೆದುಕೊಳ್ಳುವುದಲ್ಲದೆ ನೋಡುಗರ ಗಮನ ಸೆಳೆದಿದೆ.

ಸುನೀಲ್ ಕುಮಾರ್ ವಿಎ ನಿರ್ದೇಶನದ ಈ ಚಿತ್ರದಲ್ಲಿ ರಾಜವರ್ದನ್ ಗೆ ಜೋಡಿಯಾಗಿ ತಪಸ್ವಿನಿ ಪೂಣಚ್ಚ ಅಭಿನಯಿಸಿದ್ದು, ಸಿಸ್ಯಾ ದೀಪಕ್, ಕಬೀರ್ ಸಿಂಗ್, ಶರತ್ ಲೋಹಿತಾಸ್ವ,  ಉಳಿದ ಪಾತ್ರ ವರ್ಗದಲ್ಲಿದ್ದಾರೆ. ಲೈಫ್ ಲೈನ್ ಫಿಲ್ಮ್ಸ್ ಬ್ಯಾನರ್ ನಲ್ಲಿ ನರಸಿಂಹ ಮೂರ್ತಿ ನಿರ್ಮಾಣ ಮಾಡಿದ್ದು, ಮಲ್ಲಿಕಾರ್ಜುನ್ ಕಾಶಿ & ಕ್ಸೇವಿಯರ್ ಫರ್ನಾಂಡಿಸ್ ಸಹ ನಿರ್ಮಾಪಕರಾಗಿ ಕೆಲಸ ಮಾಡಿದ್ದಾರೆ. ಮನೋಮೂರ್ತಿ ಸಂಗೀತ  ಸಂಯೋಜನೆ ನೀಡಿದ್ದಾರೆ. ಜ್ಞಾನೇಶ್ ಬಿ ಮಾತಾಡ್ ಸಂಕಲನ, ಕೆ ಎಸ್ ಚಂದ್ರಶೇಖರ್  ಛಾಯಾಗ್ರಹಣ, ಧನಂಜಯ ಬಿ ನೃತ್ಯ ನಿರ್ದೇಶನವಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...