ರಘು ಭಟ್ ಹಾಗೂ ಸುಧೀಂದ್ರ ಎನ್ ಜಂಟಿಯಾಗಿ ನಿರ್ದೇಶಿಸಿರುವ ‘ನಿಮಗೊಂದು ಸಿಹಿ ಸುದ್ದಿ’ ಚಿತ್ರದ ಟ್ರೈಲರ್ ಯೂಟ್ಯೂಬ್ ನಲ್ಲಿ ರಿಲೀಸ್ ಆಗಿದೆ. ಈ ಟೀಸರ್ ನೋಡುಗರಲ್ಲಿ ಸಾಕಷ್ಟು ಕುತೂಹಲ ಮೂಡಿಸಿದ್ದು, ಕೆಲವೇ ಗಂಟೆಗಳಲ್ಲಿ ಸಾಕಷ್ಟು ವೀಕ್ಷಣೆ ಪಡೆದುಕೊಂಡಿದೆ.
ಈ ಚಿತ್ರದಲ್ಲಿ ರಘು ಭಟ್ ಅವರೇ ನಾಯಕನಾಗಿದ್ದು, ಅವರಿಗೆ ಜೋಡಿಯಾಗಿ ಕಾವ್ಯ ಶೆಟ್ಟಿ ಅಭಿನಯಿಸಿದ್ದಾರೆ. ಸುಜಯ್ ಶಾಸ್ತ್ರಿ, ಶಿಲ್ಪಾ ಶೈಲೇಶ್, ಪ್ರಜ್ವಲ್, ಹರಿಣಿ ಶ್ರೀಕಾಂತ್, ಪದ್ಮಿನಿ ನರಸಿಂಹನ್, ಉಳಿದ ಪಾತ್ರ ವರ್ಗದಲ್ಲಿದ್ದಾರೆ. ಅವ್ಯಕ್ತ ಮೂವೀಸ್ ಬ್ಯಾನರ್ ನಲ್ಲಿ ಹರೀಶ್ ಎನ್ ಗೌಡ ನಿರ್ಮಾಣ ಮಾಡಿದ್ದು, ನವೀನ್ ತೇಜ್, ರಘುನಾಥ ಎಲ್ ಅವರ ಸಂಕಲನ ಹಾಗೂ ಆನಂದ್ ಸುಂದರೇಶ್ ಛಾಯಾಗ್ರಹಣವಿದೆ. ಅಶ್ವಿನ್ ತೇಜ್ ಸಂಗೀತ ಸಂಯೋಜನೆ ನೀಡಿದ್ದಾರೆ.