ಕೋವಿಡ್ ಸಾಂಕ್ರಮಿಕದಿಂದ ಕಳೆದ ಒಂದು ವರ್ಷದಿಂದ ಜಗತ್ತಿನೆಲ್ಲೆಡೆ ಜನರಿಗೆ ಭಾರೀ ಸಂಕಷ್ಟದ ದಿನಗಳು ಎದುರಾಗಿವೆ.
ಬಾಲಿವುಡ್ನ ಪ್ರತಿಷ್ಠಿತ ಕಪೂರ್ ಕುಟುಂಬಕ್ಕೆ ಈ ಕಾಲಘಟ್ಟ ಇನ್ನಷ್ಟು ಯಾತನಾದಾಯಕವಾಗಿದೆ. ಬಾಲಿವುಡ್ ದಂತಕಥೆ ರಾಜ್ ಕಪೂರ್ರ ಮೂವರು ಮಕ್ಕಳಾದ ರಿತು ನಂದಾ, ರಿಶಿ ಕಪೂರ್ ಹಾಗೂ ರಾಜೀವ್ ಕಪೂರ್ 13 ತಿಂಗಳುಗಳ ಅವಧಿಯಲ್ಲಿ ನಿಧನರಾಗಿದ್ದಾರೆ. ಈ ಮೂಲಕ ರಾಜ್ ಕಪೂರ್ರ ಎಲ್ಲ ಐವರೂ ಮಕ್ಕಳೂ ನಮ್ಮ ನಡುವೆ ಇಲ್ಲ.
ಕ್ಯಾನ್ಸರ್ ವಿರುದ್ಧದ ತಮ್ಮ ಯುದ್ಧದಲ್ಲಿ ಸೋಲು ಕಂಡ ರಿತು ಜನವರಿ 14, 2020ರಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರು ಉದ್ಯಮಿ ರಾಜನ್ ನಂದಾರನ್ನು ವರಿಸಿದ್ದರು.
ನಟಿ ಕಾಜಲ್ ಅಗರ್ವಾಲ್ಗೆ ಅಸ್ತಮಾ..! ಇಲ್ಲಿದೆ ನೋಡಿ ಅಸ್ತಮಾ ಕುರಿತ ಬಹುಮುಖ್ಯ ಮಾಹಿತಿ
ಇದೇ ಕ್ಯಾನ್ಸರ್ಗೆ ಅಮೆರಿಕದಲ್ಲಿ ಚಿಕಿತ್ಸೆ ಪಡೆದು ಸೆಪ್ಟೆಂಬರ್ 2019ರಲ್ಲಿ ಭಾರತಕ್ಕೆ ಮರಳಿದ್ದರು. ಆಗ ತಮ್ಮ ಸಹೋದರಿಯ ಅಂತ್ಯಕ್ರಿಯೆಯಲ್ಲಿ ರಿಶಿ ಭಾಗವಹಿಸಿದ್ದರು. ಇದಾದ ಮೂರು ತಿಂಗಳುಗಳ ಬಳಿಕ, ಏಪ್ರಿಲ್ 30, 2020ರಲ್ಲಿ ರಿಶಿ ಸಹ ಕ್ಯಾನ್ಸರ್ನಿಂದಾಗಿ ಇಹಲೋಕ ತ್ಯಜಿಸಿದ್ದರು.
ಇದೀಗ ಇವರ ಕಿರಿಯ ಸಹೋದರ ರಾಜೀವ್ ಕಪೂರ್ ಸಹ ಫೆಬ್ರವರಿ 9ರಂದು ಇಹಲೋಕ ತ್ಯಜಿಸಿದ್ದಾರೆ.