ಕಾರವಾರ: ಬಿಸಿ ಗಂಜಿ ಪಾತ್ರೆಗೆ ಬಿದ್ದು ಎರಡು ವರ್ಷದ ಮಗು ಸಾವನ್ನಪ್ಪಿದ ಘಟನೆ ಉತ್ತರ ಕನ್ನಡ ಜಿಲ್ಲೆ ಮುಂಡಗೋಡ ತಾಲೂಕಿನಲ್ಲಿ ನಡೆದಿದೆ.
ಬೀರು ಲಂಬೋರ್ ಅವರ ಪುತ್ರ ಕೃಷ್ಣ ಲಂಬೋರ್(2) ಮೃತಪಟ್ಟ ಮಗು. ನಾಯಿಗಳ ಆಹಾರಕ್ಕಾಗಿ ಬೇಯಿಸುತ್ತಿದ್ದ ಗಂಜಿ ಬೋಗಣಿಗೆ ಬಿದ್ದು ಮಗು ಮೃತಪಟ್ಟಿದೆ.
ಬೀರು ಲಂಬೋರ್ ಅವರು ಸಾಕಿದ ನಾಯಿಗಳಿಗೆ ನೀಡಲು ಗಂಜಿ ಬೇಯಿಸುತ್ತಿದ್ದರು. ಈ ವೇಳೆ ಅಲ್ಲಿ ಆಟವಾಡುತ್ತಿದ್ದ ಅವರ ಎರಡು ವರ್ಷದ ಮಗ ಕುದಿಯುತ್ತಿದ್ದ ಗಂಜಿ ಬೋಗಣಿಯಲ್ಲಿ ಬಿದ್ದು ಮೈ ಕೈ ಸುಟ್ಟುಕೊಂಡಿದೆ. ತಕ್ಷಣ ಮಗುವನ್ನು ಸ್ಥಳೀಯ ಆಸ್ಪತ್ರೆಗೆ ತೋರಿಸಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮಗು ಸಾವನ್ನಪ್ಪಿದೆ.