
ಹೈದರಾಬಾದ್: ಮಂಗಳವಾರ ತೆಲಂಗಾಣ ಹೈಕೋರ್ಟ್‌ನಲ್ಲಿ ಒಂದು ದುರಂತ ಘಟನೆ ಸಂಭವಿಸಿದೆ. ನ್ಯಾಯಾಲಯದಲ್ಲಿ ಪ್ರಕರಣದ ವಾದ ಮಂಡಿಸುತ್ತಿದ್ದಾಗ ವಕೀಲರೊಬ್ಬರು ಹೃದಯಾಘಾತವಾಗಿ ಮೃತಪಟ್ಟಿದ್ದಾರೆ.
ಮೃತರನ್ನು ವೇಣುಗೋಪಾಲ್ ರಾವ್ ಎಂದು ಗುರುತಿಸಲಾಗಿದೆ. ಹಿರಿಯ ವಕೀಲ ರಾವ್ ಅವರು ಕೋರ್ಟ್ ಹಾಲ್ 21 ರಲ್ಲಿ ನ್ಯಾಯಾಧೀಶರ ಮುಂದೆ ವಾದ ಮಂಡಿಸುತ್ತಿದ್ದಾಗ ಇದ್ದಕ್ಕಿದ್ದಂತೆ ಕುಸಿದು ಬಿದ್ದರು. ಇದರ ನಂತರ, ಸಹ ವಕೀಲರು ಮತ್ತು ನ್ಯಾಯಾಲಯದ ಸಿಬ್ಬಂದಿ ರಾವ್ ಅವರ ಸಹಾಯಕ್ಕೆ ಧಾವಿಸಿದರು ಮತ್ತು ಅವರನ್ನು ಉಸ್ಮಾನಿಯಾ ಆಸ್ಪತ್ರೆಗೆ ಸಾಗಿಸಲಾಯಿತು.
ಪರೀಕ್ಷಿಸಿದ ವೈದ್ಯರು ಅವರು ಆಸ್ಪತ್ರೆಗೆ ಆಗಮಿಸುವಾಗಲೇ ಸಾವನ್ನಪ್ಪಿದ್ದಾರೆ ಎಂದು ದೃಢಪಡಿಸಿದ್ದಾರೆ. ನಂತರ ಅವರು ಸಾವಿಗೆ ಕಾರಣ ಹೃದಯಾಘಾತ ಎಂದು ಹೇಳಿದ್ದಾರೆ. ರಾವ್ ಅವರ ಹಠಾತ್ ನಿಧನಕ್ಕೆ ಹೈದರಾಬಾದ್ ನಲ್ಲಿ ಕಾನೂನು ಸಮುದಾಯ ಶೋಕದಲ್ಲಿ ಮುಳುಗಿದೆ.