ಕಾರವಾರ: ಮಂಚಿಕೇರಿ ಸಮೀಪ ಬೇಡ್ತಿಹಳ್ಳದಲ್ಲಿ ಮುಳುಗಿ ತಂದೆ, ಮಗ ಸಾವನ್ನಪ್ಪಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಮಂಚಿಕೇರಿ ಬಳಿ ಘಟನೆ ನಡೆದಿದೆ.
ಹಳ್ಳಿಗದ್ದೆ ಗ್ರಾಮದ ಖಲಂದರ್ ಫಕೃಸಾಬ್, ಅವರ ಪುತ್ರ ತನ್ವೀರ್ ಸಾವನ್ನಪ್ಪಿದ್ದಾರೆ. ನಿನ್ನೆ ಬೇಡ್ತಿಹಳ್ಳದಲ್ಲಿ ತಂದೆ, ಮಗ ಮೀನು ಹಿಡಿಯಲು ಹೋಗಿದ್ದರು. ರಾತ್ರಿಯಾದರೂ ಮನೆಗೆ ಬಾರದ ಹಿನ್ನೆಲೆಯಲ್ಲಿ ಕುಟುಂಬಸ್ಥರಿಗೆ ಅನುಮಾನ ಬಂದಿದೆ.
ಇಂದು ಕುಟುಂಬದವರು ಹುಡುಕಾಟ ನಡೆಸಿದಾಗ ಹಳ್ಳದಲ್ಲಿ ಮೃತ ದೇಹಗಳು ಪತ್ತೆಯಾಗಿವೆ. ಘಟನೆ ಸ್ಥಳಕ್ಕೆ ಯಲ್ಲಾಪುರ ಠಾಣೆಯ ಪೊಲೀಸರು ಭೇಟಿ ನೀಡಿದ್ದಾರೆ. ಸ್ಥಳೀಯರ ಸಹಾಯದಿಂದ ಮೃತದೇಹಗಳನ್ನು ಪೊಲೀಸರು ಹೊರಗೆ ತೆಗೆದಿದ್ದಾರೆ.