ಬೆಂಗಳೂರು: ಬೆಂಗಳೂರಿನಲ್ಲಿ ಮರದ ತುಂಡು ಬಿದ್ದು ಬಾಲಕಿ ಸಾವನ್ನಪ್ಪಿದ ಘಟನೆ ನಡೆದಿದೆ. ವಿವಿ ಪುರಂ ಮೆಟ್ರೋ ಸ್ಟೇಷನ್ ಬಳಿ ರಸ್ತೆಯಲ್ಲಿ ಹೋಗುತ್ತಿದ್ದ ವೇಳೆ ಅವಘಡ ಸಂಭವಿಸಿದೆ.
15 ವರ್ಷದ ತೇಜಸ್ವಿನಿ ಮೃತಪಟ್ಟವರು ಎಂದು ಹೇಳಲಾಗಿದೆ. ನಿರ್ಮಾಣ ಹಂತದ ಕಟ್ಟಡವೊಂದರ ನಾಲ್ಕನೇ ಮಹಡಿಯಿಂದ ಮರದ ತುಂಡು ಬಿದ್ದು ಅವಘಡ ನಡೆದಿದೆ. ನಡೆದುಕೊಂಡು ಬರುತ್ತಿದ್ದ ತೇಜಸ್ವಿನಿ ಮೇಲೆ ಮರದ ತುಂಡು ಬಿದ್ದು, ಗಂಭೀರ ಪೆಟ್ಟಾಗಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ವಿವಿ ಪುರಂ ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.