
ಬೆಂಗಳೂರು: ಟ್ರ್ಯಾಫಿಕ್ ಪೊಲೀಸರು ಹಣಕ್ಕಾಗಿ ಬೈಕ್ ಸವಾರನ ಮೇಲೆ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ.
ಈಶ್ವರ್ ಹಲ್ಲೆಗೊಳಗಾಗಿರುವ ಬೈಕ್ ಸವಾರ. ಮಾರ್ಚ್ 14ರಂದು ಬೈಕ್ ನಲ್ಲಿ ತೆರಳುತ್ತಿದ್ದಾಗ ಬೆಂಗಳೂರಿನ ಜಿಟಿ ಮಾಲ್ ಬಳಿ ವಿಜಯನಗರ ಟ್ರಾಫಿಕ್ ಪೊಲೀಸ್ ಬೈಕ್ ತಡೆದಿದ್ದಾರೆ.ಈ ವೇಳೆ ನೀವು ಮದ್ಯ ಸೇವಿಸಿದ್ದು ದೃಢವಾಗಿದೆ. 10 ಸಾವಿರ ದಂಡ ಪಾವತಿ ಮಾಡಬೇಕು. ಅದರ ಬದಲು 3 ಸಾವಿರ ಈಗಲೇ ಹಣ ನೀಡಿದರೆ ಬಿಟ್ಟು ಕಳುಹಿಸುತ್ತೇವೆ ಎಂದರು.
ಫೋನ್ ಪೇ ಮೂಲಕ ಹಣ ಪಾವತಿಸುವುದಾಗಿ ಹೇಳಿದಾಗ ಕ್ಯಾಶ್ ನೀಡುವಂತೆ ಕೇಳಿದ್ದಾರೆ. ಕ್ಯಾಶ್ ಇಲ್ಲ, ಹತ್ತು ಸಾವಿರ ದಂದ ಕೋರ್ಟ್ ನಲ್ಲಿ ಕಟ್ಟುತ್ತೇನೆ ಎಂದಿದ್ದಕ್ಕೆ ಬೈಕ್ ಸೀಜ್ ಮಾಡಿದ್ದಾರೆ. ಬಳಿಕ ಹೊಯ್ಸಳ ಕರೆಸಿ ಗೋವಿಂದರಾಜನಗರ ಠಾಣೆಗೆ ಕರೆದೊಯ್ದು ಕರ್ತವ್ಯಕ್ಕ್ರ್ ಅಡ್ಡಿ ಪಡಿಸಿದ್ದಾಗಿ ಕೇಸ್ ಹಾಕುವುದಾಗಿ ಬೆದರಿಸಿದರು. ಕೋರ್ಟ್ ನಲ್ಲಿ ದಂಡ ಕಟ್ಟುಹುದಾಗಿ ಹೇಳಿ ವಾಪಾಸ್ ಆಗಿದ್ದಾಗಿ ಈಶ್ವರ್ ತಿಳಿಸಿದ್ದಾರೆ. ಮಾರ್ಚ್ 15ರಂದು ಕೋರ್ಟ್ ಗೆ ಹೋಗಿ ಬಾಕಿಇ ದಂಡ ಸೇರಿ 13 ಸಾವಿರ ರೂ ಕಟ್ಟಿ, ರಶೀದಿ ಜೊತೆ ಪೊಲೀಸ್ ಠಾಣೆಗೆ ಹೋಗಿ ಬೈಕ್ ಬಿಡಿಸಿಕೊಳ್ಳಲು ಹೋದಾಗ ವಿಜಯನಗರ ಠಾಣೆಗೆ ಕರೆದೊಯ್ದಿದ್ದಾರೆ.
ಅಲ್ಲಿ ಎಸ್ ಐ ಶಾಂತರಾಮ್ ಹಗೂ ಸಿಬ್ಬಂದಿ ಸಿದ್ಧಿಕ್ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ಅವಾಚ್ಯವಾಗಿ ನಿಂದಿಸಿ, ಬೂಟ್ ನಿಂದ ಒದ್ದು ಥಳಿಸಿದ್ದಾಗಿ ಈಶ್ವರ್ ಆರೋಪಿಸಿದ್ದಾರೆ. ಪೊಲೀಸರ ಹಲ್ಲೆಯಿಂದ ಪ್ರಜ್ಞೆ ಕಳೆದುಕೊಂಡಿದ್ದ ನನ್ನನ್ನು ಸ್ನೇಹಿತರು ವಿಕ್ಟೋರಿಇಯಾ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ವಿಡಿಇಯೋ ಮಾಡಿಟ್ಟು ಅಳಲು ತೋಡಿಕೊಂಡಿದ್ದಾರೆ.