ಬೆಂಗಳೂರು: ಇ- ಕಾಮರ್ಸ್ ವಿತರಕ ಸವಾರರ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಿದ ಬೆಂಗಳೂರು ಸಂಚಾರ ಪೊಲೀಸರು ನಿಯಮ ಉಲ್ಲಂಘಿಸಿದ ಆರೋಪದಡಿ 2679 ಪ್ರಕಾರದ ಕಲಿಸಿ 13.78 ಲಕ್ಷ ರೂ. ದಂಡ ವಸೂಲಿ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಇತ್ತೀಚೆಗೆ ಆ್ಯಪ್ ಆಧಾರಿತ ಟ್ಯಾಕ್ಸಿ, ಫುಡ್ ಡೆಲಿವರಿ ಸೇರಿ ಇ- ಕಾಮರ್ಸ್ ವಿತರಕ ಸವಾರರ ವಿರುದ್ಧ ಸಂಚಾರ ನಿಯಮ ಉಲ್ಲಂಘನೆ ಕುರಿತು ಸಾಕಷ್ಟು ದೂರು ಬಂದ ಹಿನ್ನೆಲೆಯಲ್ಲಿ ಶನಿವಾರ ನಗರದ ಎಲ್ಲಾ ಸಂಚಾರ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ವಿಶೇಷ ಕಾರ್ಯಚರಣೆ ನಡೆಸಿ ಸಂಚಾರ ನಿಯಮ ಉಲ್ಲಂಘಿಸಿದವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಹೆಲ್ಮೆಟ್ ರಹಿತ ಚಾಲನೆ 781, ಚಾಲನೆ ವೇಳೆ ಮೊಬೈಲ್ ಬಳಕೆ 26, ಸಿಗ್ನಲ್ ಜಂಪ್ 45, ನೋ ಎಂಟ್ರಿ 404, ಟ್ರಿಪಲ್ ರೈಡಿಂಗ್ 52, ನೋ ಪಾರ್ಕಿಂಗ್ 105, ದೋಷಪೂರಿತ ನೋಂದಣಿ ಫಲಕ 119 ಸೇರಿದಂತೆ ಒಟ್ಟು 2679 ಪ್ರಕರಣ ದಾಖಲಿಸಿ 13.78 ಲಕ್ಷ ರೂಪಾಯಿ ದಂಡ ವಸೂಲಿ ಮಾಡಲಾಗಿದೆ.