ಎಂಥವರನ್ನೂ ಬೆಚ್ಚಿಬೀಳಿಸುವಂತಿದೆ ಈ 16 ಸೆಕೆಂಡಿನ ವಿಡಿಯೋ. ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಈಗ ಸಖತ್ ವೈರಲ್ ಆಗುತ್ತಿದೆ.
ಅದು ಫುಲ್ ಟ್ರಾಫಿಕ್‌ನಿಂದ ಕೂಡಿರೋ ರಸ್ತೆ. ಅಲ್ಲಿ ಬಸ್, ರಿಕ್ಷಾ, ಬೈಕ್‌ಗಳು ಒಂದಾದ ಮೇಲೆ ಓಡಾಡ್ತಾನೇ ಇದ್ದವು. ಅದೇ ಸಂದರ್ಭದಲ್ಲಿ ಒಂದು ದೊಡ್ಡ ಅನಾಹುತ ಸಂಭವಿಸಲಿತ್ತು. ಆದರೆ ಟ್ರಾಫಿಕ್ ಪೋಲೀಸ್ ಸಮಯ ಪ್ರಜ್ಞೆಯಿಂದ ದೊಡ್ಡ ಅನಾಹುತ ಜಸ್ಟ್ ಮಿಸ್ ಆಗಿದೆ.
ಚಲಿಸುತ್ತಿದ್ದ ಎಲೆಕ್ಟ್ರಿಕ್ ರಿಕ್ಷಾದಿಂದ ಮಗುವೊಂದು ಆಯತಪ್ಪಿ ಆಕಸ್ಮಿಕವಾಗಿ ಕೆಳಗೆ ಬೀಳುತ್ತದೆ. ಅದೇ ವೇಳೆ ಹಿಂಬದಿಯಿಂದ ಬಸ್ ಬರುತ್ತಿರುತ್ತೆ. ಇನ್ನೇನು ಮಗುವಿನ ಮೇಲೆ ಆ ಬಸ್ ಹಾದೇ ಬಿಡುತ್ತೆ ಅಂತ ಅಂದುಕೊಳ್ಳುವಷ್ಟರಲ್ಲೇ ಅಲ್ಲೇ ಇದ್ದ ಟ್ರಾಫಿಕ್ ಪೊಲೀಸ್ ಓಡಿ ಹೋಗಿ ಬಿದ್ದ ಮಗುವನ್ನ ಎತ್ತಿಕೊಂಡಿದ್ದಾರೆ.
ಅಷ್ಟೆ ಅಲ್ಲ ಬಸ್ ಡ್ರೈವರ್ ಗಮನಕ್ಕೆ ಬಂದಾಕ್ಷಣ ಡ್ರೈವರ್ ಬ್ರೇಕ್ ಹಾಕಿದ್ದಾನೆ. ಟ್ರಾಫಿಕ್ ಪೊಲೀಸ್ ಹಾಗೂ ಬಸ್ ಡ್ರೈವರ್ ಸಮಯಪ್ರಜ್ಞೆಯಿಂದಾಗಿ ಆ ಮಗು ಸೇಫ್ ಆಗಿದೆ.
ಸಿಸಿ ಟಿವಿಯಲ್ಲಿ ರೆಕಾರ್ಡ್ ಆಗಿರೋ ಈ ದೃಶ್ಯವನ್ನ ಐಎಎಸ್ ಅಧಿಕಾರಿ ಅವನೀಶ್ ಶರಣ್ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಶೇರ್ ಆದ ಈ 16 ಸೆಕೆಂಡಿನ ವಿಡಿಯೋ ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ಜನರು ವೀಕ್ಷಿಸಿದ್ದಾರೆ.
ಟ್ರಾಫಿಕ್ ಪೊಲೀಸ್ ಸಮಯ ಪ್ರಜ್ಞೆ ನೋಡಿ ಜನರು ಆತನನ್ನ ರಿಯಲ್ ಹೀರೋ ಅಂತ ಹೊಗಳುತ್ತಿದ್ದಾರೆ. ನೆಟ್ಟಿಗರು ಕೂಡಾ ಈ ವಿಡಿಯೋ ಶೇರ್ ಮಾಡಿಕೊಂಡು ಟ್ರಾಫಿಕ್ ಪೊಲೀಸ್ ಗೆ ಹ್ಯಾಟ್ಸ್ಆಫ್ ಅಂತ ಹೇಳಿದ್ದಾರೆ.