ಅನೇಕ ಬಾರಿ ರಸ್ತೆ ಸಾರಿಗೆ ನಿಯಮಗಳನ್ನು ಸರಿಯಾಗಿ ಪಾಲನೆ ಮಾಡಿದ್ರೂ ಸಂಚಾರಿ ಪೊಲೀಸರು ವಾಹನ ನಿಲ್ಲಿಸಿ ನೂರಾರು ಪ್ರಶ್ನೆ ಕೇಳ್ತಾರೆ. ಆದ್ರೆ ಇನ್ಮುಂದೆ ಮುಂಬೈನಲ್ಲಿ ಓಡಾಡುವ ವಾಹನ ಸವಾರರಿಗೆ ಈ ಕಿರಿಕಿರಿ ಇರುವುದಿಲ್ಲ. ಸಂಚಾರಿ ಪೊಲೀಸರು ಅನಗತ್ಯವಾಗಿ ವಾಹನ ನಿಲ್ಲಿಸುವಂತಿಲ್ಲ. ಚಿಕ್ಕಪುಟ್ಟ ನೆಪ ಹೇಳಿ ವಾಹನ ಪರೀಕ್ಷೆ ಮಾಡುವಂತಿಲ್ಲ.
ಟ್ರಾಫಿಕ್ ಪೋಲಿಸರು, ವಾಹನಗಳನ್ನು ಅನವಶ್ಯಕ ತಪಾಸಣೆ ಮಾಡುವಂತಿಲ್ಲ. ಅವರು ಟ್ರಾಫಿಕ್ ಮೇಲ್ವಿಚಾರಣೆ ಮಾತ್ರ ಮಾಡಬೇಕಾಗುತ್ತದೆ ಎಂದು ಸುತ್ತೋಲೆಯಲ್ಲಿ ಹೇಳಲಾಗಿದೆ. ಟ್ರಾಫಿಕ್‌ನ ವೇಗಕ್ಕೆ ಏನಾದರೂ ವ್ಯತ್ಯಾಸವಾಗಿದ್ದರೆ ಮಾತ್ರ ಅವರು ಆ ವಾಹನವನ್ನು ನಿಲ್ಲಿಸಿ ವಿಚಾರಿಸಬೇಕು.
ಟ್ರಾಫಿಕ್ ಪೋಲಿಸರು ಅನುಮಾನದ ಆಧಾರದ ಮೇಲೆ ಎಲ್ಲಿ ಬೇಕಾದರೂ ವಾಹನಗಳನ್ನು ನಿಲ್ಲಿಸಿ ಬಿಡುತ್ತಾರೆ. ವಾಹನದ ಒಳಗೂ, ಹೊರಗೂ ಪರೀಕ್ಷಿಸೋಕೆ ಪ್ರಾರಂಭಿಸುತ್ತಾರೆ. ಇದರಿಂದಾಗಿ ರಸ್ತೆಗಳಲ್ಲಿ ವಾಹಸ ಸಂಚಾರಕ್ಕೆ ಅಡ್ಡಿಯುಂಟಾಗುತ್ತದೆ. ವಾಹನ ಸವಾರರು ಸಂಚಾರಿ ನಿಯಮಗಳನ್ನು ಉಲ್ಲಂಘಿಸುತ್ತಿದ್ದರೆ, ಮೋಟಾರು ವಾಹನ ಕಾಯ್ದೆಯ ನಿಯಮಗಳ ಅಡಿಯಲ್ಲಿ ಅವರನ್ನು ಸಂಚಾರ ಪೊಲೀಸರು ನಿಲ್ಲಿಸಬಹುದೆಂದು ಸುತ್ತೋಲೆಯಲ್ಲಿ ಹೇಳಲಾಗಿದೆ.