ಬೆಂಗಳೂರು: ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ದಂಡಪಾವತಿಸಲು ಬೆಂಗಳೂರು ನಗರದಲ್ಲಿ ಜಾರಿಯಲ್ಲಿರುವ ಇ- ಚಲನ್ ಸೇವೆಯನ್ನು ರಾಜ್ಯ ವಿಸ್ತರಿಸಲು ಪೊಲೀಸ ಇಲಾಖೆ ಮುಂದಾಗಿದೆ.
ಸ್ಥಳದಲ್ಲೇ ದಂಡ ವಸೂಲಿ, ಪಾರದರ್ಶಕತೆ ಉದ್ದೇಶದಿಂದ ಇ- ಚಲನ್ ಸೇವೆಯನ್ನು ಜಾರಿಗೆ ತರಲಾಗಿದ್ದು, ಎಲ್ಲಾ ಪೊಲೀಸ್ ಠಾಣೆಗಳಿಗೆ ಪರ್ಸನಲ್ ಡಿಜಿಟಲ್ ಅಸಿಸ್ಟೆಂಟ್ ಉಪಕರಣಗಳನ್ನು ವಿತರಣೆ ಮಾಡಲಾಗುತ್ತಿದೆ. ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್, ಯುಪಿಐ ಮೂಲಕ ದಂಡ ಕಟ್ಟಬಹುದು.
ಕಾನೂನು ಮತ್ತು ಸುವ್ಯವಸ್ಥೆ ಪೊಲೀಸ್ ಠಾಣೆಗಳಿಗೆ ತಲಾ ಎರಡು, ಸಂಚಾರ ಪೊಲೀಸ್ ಠಾಣೆಗಳಿಗೆ ತಲಾ ಐದು ಪರ್ಸನಲ್ ಡಿಜಿಟಲ್ ಅಸಿಸ್ಟೆಂಟ್ ಉಪಕರಣಗಳನ್ನು ವಿತರಿಸಲಾಗುವುದು. ಇದನ್ನು ಬಳಸಿಕೊಂಡು ಸ್ಥಳದಲ್ಲಿಯೇ ವಾಹನ ಸವಾರರು, ಚಾಲಕರು ದಂಡಪಾವತಿಸಿ ರಶೀದಿ ಪಡೆದುಕೊಳ್ಳಬಹುದು. ಅಲ್ಲದೇ ಯಾವ ಸ್ಥಳದಿಂದ ದಂಡ ವಿಧಿಸಲಾಗಿದೆ ಎನ್ನುವ ಲಿಂಕ್ ಕೂಡ ಸಿಗಲಿದೆ.