ಬೆಂಗಳೂರು : ಬೆಂಗಳೂರಿನ ಟ್ರಾಫಿಕ್ ಕಿರಿಕಿರಿ ಎಲ್ಲರಿಗೂ ಸಾಕಾಗಿ ಹೋಗಿದೆ. ಬೆಂಗಳೂರಿನಲ್ಲಿ ವಾಸಿಸುತ್ತಿರುವ ಜನರು ಟ್ರಾಫಿಕ್ ಕಿರಿಕಿರಿಗೆ ಬೇಸತ್ತು ಹೋಗಿದ್ದಾರೆ. ಟ್ರಾಫಿಕ್ ನಿಂದ ಅಂದುಕೊಂಡಂತೆ ಸರಿಯಾದ ಸಮಯಕ್ಕೆ ಹೋಗುವುದಕ್ಕೆ ಆಗಲ್ಲ ಎಂದು ಜನರು ಪ್ರತಿನಿತ್ಯ ಗೊಣಗುತ್ತಿದ್ದಾರೆ.
ಬೆಂಗಳೂರಿನ ಟ್ರಾಫಿಕ್ ಗೆ ಬೇಸತ್ತ ಮಧುಮಗಳೊಬ್ಬರು ಕಾರು ಬಿಟ್ಟು ಮೆಟ್ರೋ ಏರಿದ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ. ವಧು ತನ್ನ ಕುಟುಂಬ ಮತ್ತು ಸ್ನೇಹಿತರೊಂದಿಗೆ ಇರುವ ವೈರಲ್ ವೀಡಿಯೊ ಅಂತರ್ಜಾಲದಲ್ಲಿ ಹರಿದಾಡುತ್ತಿದೆ. ವಧು ಮೆಟ್ರೋ ರೈಲು ಹತ್ತುತ್ತಿರುವಾಗ ಕೈ ಬೀಸುವ ವಿಡಿಯೋ ವೈರಲ್ ಆಗಿದೆ. ಬಳಕೆದಾರರೊಬ್ಬರು ತಮಾಷೆಯಾಗಿ ” ಮೆಟ್ರೋವಾಲೆ ದುಲ್ಹನಿಯಾ ಲೇ ಜಾಯೆಂಗಾ” ಎಂದು ಕಮೆಂಟ್ ಮಾಡಿದ್ದಾರೆ.
ಸಾಮಾನ್ಯವಾಗಿ ವಧು-ವರರು ಮದುವೆ ಮಂಟಪಕ್ಕೆ ಕಾರಿನಲ್ಲಿ ತೆರಳುವುದು ಸಾಮಾನ್ಯ, ಆದರೆ ಬೆಂಗಳೂರಿನಲ್ಲಿ ಮಧು ಮಗಳೊಬ್ಬರು ಟ್ರಾಫಿಕ್ ಜಾಮ್ ನಲ್ಲಿ ಕಾರು ಸಿಲುಕಿದ ಹಿನ್ನೆಲೆ ಕಾರು ಬಿಟ್ಟು ಮೆಟ್ರೋ ರೈಲಿನ ಮೂಲಕ ಮದುವೆ ಮಂಟಪ ತಲುಪಿದ್ದಾಳೆ. ವಧು ತನ್ನ ಕುಟುಂಬದ ಸದಸ್ಯರು, ಸ್ನೇಹಿತರೊಂದಿಗೆ ಮೆಟ್ರೋದಲ್ಲಿ ಸಂಚರಿಸುವುದು ವಿಡಿಯೊದಲ್ಲಿ ಕಂಡು ಬಂದಿದೆ. ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಹಂಚಿಕೊಂಡ ಈ ದೃಶ್ಯವನ್ನು ಈಗಾಗಲೇ 19,000ಕ್ಕಿಂತ ಅಧಿಕ ಮಂದಿ ವೀಕ್ಷಿಸಿದ್ದಾರೆ.