ಬೆಂಗಳೂರು: ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ದಂಡ ಪಾವತಿಗೆ ನೀಡಲಾದ ಶೇಕಡ 50ರಷ್ಟು ರಿಯಾಯಿತಿ ನಾಳೆ ಕೊನೆಯಾಗಲಿದೆ.
ಫೆಬ್ರವರಿ 11 ಕ್ಕೆ ಶೇಕಡ 50ರಷ್ಟು ರಿಯಾಯಿತಿ ಅವಧಿ ಮುಕ್ತಾಯವಾಗಲಿದ್ದು, ಅವಧಿ ವಿಸ್ತರಿಸುವ ಪ್ರಸ್ತಾಪ ಸರ್ಕಾರದ ಮುಂದಿಲ್ಲ ಎಂದು ಸಾರಿಗೆ ಇಲಾಖೆ ಆಯುಕ್ತ ಸಿದ್ದರಾಮಪ್ಪ ಹೇಳಿದ್ದಾರೆ.
ಪಾನಮತ್ತ ಚಾಲನೆ ಹೊರತಾಗಿ ಉಳಿದೆಲ್ಲ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಿಗೆ ಫೆಬ್ರವರಿ 11ರವರೆಗೆ ಶೇಕಡ 50ರಷ್ಟು ರಿಯಾಯಿತಿ ನೀಡಿ ದಂಡಪಾವತಿಸಲು ಆದೇಶ ಹೊರಡಿಸಲಾಗಿತ್ತು. ಫೆಬ್ರವರಿ 11 ರಿಂದ ರಾಜ್ಯವ್ಯಾಪಿ ರಾಷ್ಟ್ರೀಯ ಲೋಕ ಅದಾಲತ್ ನಡೆಯಲಿರುವ ಹಿನ್ನೆಲೆಯಲ್ಲಿ ರಿಯಾಯಿತಿ ಅವಧಿ ಕೊನೆಯಾಗಲಿದೆ.
ಸಂಚಾರ ಠಾಣೆಗಳಲ್ಲಿ ದಂಡಪಾವತಿಸಬಹುದು. ಸಂಚಾರ ಪೊಲೀಸರ ಬಳಿಯೂ ದಂಡಪಾವತಿಸಲು ಅವಕಾಶ ಕಲ್ಪಿಸಲಾಗಿದ್ದು, http://Bangaloretrafficpolice.gov.in ವೆಬ್ಸೈಟ್ ಮೂಲಕವೂ ಮೊಬೈಲ್ ನಲ್ಲಿ ದಂಡ ಪಾವತಿಸಬಹುದು.