ಸಂಚಾರಿ ಸಿಗ್ನಲ್ ಒಂದನ್ನು ಜಂಪ್ ಮಾಡಿ ಹೋದ ಕಾರನ್ನು ಬೆನ್ನಟ್ಟಿ ಹೋದ ಸಂಚಾರಿ ಪೇದೆಯೊಬ್ಬರು ಅದರ ಬಾನೆಟ್ ಮೇಲೆ ಕುಳಿತ ಬಳಿಕವೂ, ವಾಹನದ ಚಾಲಕ 50 ಮೀಟರ್‌ಗಳವರೆಗೂ ಡ್ರೈವ್ ಮಾಡಿಕೊಂಡು ಹೋದ ಆಘಾತಕಾರಿ ಘಟನೆ ನಾಗ್ಪರುದಲ್ಲಿ ನಡೆದಿದೆ.
45 ವರ್ಷ ವಯಸ್ಸಿನ ಸಾಗರ್ ಭುಜಾಡೆ ಹೆಸರಿನ ಈ ಚಾಲಕ ತನ್ನ ಮಡದಿಯೊಂದಿಗೆ ಕಾರಿನಲ್ಲಿ ಹೋಗುತ್ತಿದ್ದ ವೇಳೆ ಮೋರಿಸ್ ಕಾಲೇಜ್ ಟಿ-ಪಾಯಿಂಟ್ ಬಳಿ ಟ್ರಾಫಿಕ್ ಸಿಗ್ನಲ್ ಜಂಪ್ ಮಾಡಿದ್ದಾನೆ.
ಈ ಬಗ್ಗೆ ಮಾಹಿತಿ ಪಡೆಯುತ್ತಲೇ ಕಾರ್ಯಾಚರಣೆಗೆ ಇಳಿದ ಪೇದೆ ಸಾಗರ್ ಪಿರ್ವಾಲೇ, ಪಂಚ್‌ಶೀಲ್ ಚೌಕದ ಬಳಿ ಮತ್ತೊಂದು ಸಿಗ್ನಲ್ ಬಳಿ ನಿಲ್ಲಿಸಿದ್ದ ಕಾರಿನ ಬಳಿ ಬಂದಿದ್ದಾರೆ. ಕಾರಿನ ಚಾಲಕನೊಂದಿಗೆ ಹಿರ್ವಾಲೇ ಮಾತನಾಡುತ್ತಿರುವಂತೆಯೇ ಆತ ವಾಹನದ ವೇಗ ಹೆಚ್ಚಾಗಿಸಿದ್ದಾನೆ. ಆ ವೇಳೆ ಕಾರಿನ ಬಾನೆಟ್ ಏರಿದ್ದಾರೆ ಸಾಗರ್. ಇಷ್ಟಾದರೂ ಕಾರಿನ ಚಾಲಕ ಕಾರನ್ನು 50 ಮೀಟರ್‌ಗಳವರೆಗೂ ಪೇದೆ ಬಾನೆಟ್ ಮೇಲೆ ಇರುವಂತೆಯೇ ಕಾರನ್ನು ಓಡಿಸಿಕೊಂಡು ಹೋಗಿದ್ದಾರೆ. ಮೋಟರ್‌ಸೈಕಲ್ ಸವಾರರಿಬ್ಬರು ಕಾರನ್ನು ನಿಲ್ಲಿಸಿದ್ದಾರೆ.
ಕಲ್ಯಾಣ ಕರ್ನಾಟಕದ ಜನತೆಗೆ ಮತ್ತೊಂದು ಶಾಕ್…? ವರ್ಷದಲ್ಲಿ ನಾಲ್ಕನೇ ಬಾರಿಗೆ ವಿದ್ಯುತ್ ದರ ಹೆಚ್ಚಳ ಸಾಧ್ಯತೆ
ಘಟನಾ ಸ್ಥಳಕ್ಕೆ ಸೀತಾಬುಲ್ಡಿ ಪೊಲೀಸ್ ಠಾಣೆ ಸಿಬ್ಬಂದಿ ಹಾಗೂ ಸಂಚಾರಿ ಪೊಲೀಸರು ಧಾವಿಸಿದ್ದಾರೆ. ಆಸ್ಪತ್ರೆಯಲ್ಲಿ ಯಾರನ್ನೋ ನೋಡಲು ದೌಡಾಯಿಸುತ್ತಿದ್ದ ಕಾರಣ ತಮ್ಮಿಂದ ಹೀಗೆ ಆಗಿದೆ ಎಂದು ಕಾರಿನ ಚಾಲಕ ವಿವರಣೆ ಕೊಟ್ಟಿದ್ದಾರೆ. ಆತನ ಮಾತುಗಳ ಪರಿಶೀಲನೆ ಮಾಡಿದ ಬಳಿಕ ಕಾರನ್ನು ಮುಂದೆ ಹೋಗಲು ಬಿಟ್ಟಿದ್ದಾರೆ.
ಮೋಟಾರು ವಾಹನ ಕಾಯಿದೆಯ ಉಲ್ಲಂಘನೆ ಸಂಬಂಧ ಕಾರಿನ ಚಾಲಕನ ಮೇಲೆ ಪ್ರಕರಣ ದಾಖಲಿಸಲಾಗಿದೆ.