
ದಾವಣಗೆರೆ: ದೀಪಾವಳಿ ಹಬ್ಬಕ್ಕೆ ಟ್ರ್ಯಾಕ್ಟರ್ ತೊಳೆಯಲು ನದಿಗೆ ಹೋಗಿದ್ದ ಇಬ್ಬರು ನೀರು ಪಾಲಾಗಿದ್ದಾರೆ. ಅಣ್ಣಪ್ಪ(46), ಪ್ರಶಾಂತ್(15) ಮೃತಪಟ್ಟವರು.
ಪ್ರಶಾಂತ್ ಗುರುವಾರ ಚಿಕ್ಕಪ್ಪನಾದ ಅಣ್ಣಪ್ಪನೊಂದಿಗೆ ಹರಿಹರ ಹೊರವಲಯದಲ್ಲಿ ತುಂಗಭದ್ರಾ ನದಿಯಲ್ಲಿ ವಾಹನ ತೊಳೆಯಲು ಹೋಗಿದ್ದಾಗ ಆಕಸ್ಮಿಕವಾಗಿ ಜಾರಿ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ವಾಹನ ತೊಳೆಯುವ ವೇಳೆ ಪ್ರಶಾಂತ್ ಕಾಲು ಜಾರಿ ಗುಂಡಿಗೆ ಬಿದ್ದಿದ್ದು, ಆತನನ್ನು ರಕ್ಷಿಸಲು ಹೋದ ಅಣ್ಣಪ್ಪ ಕೂಡ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.