ಮಂಡ್ಯ: ಕಟಾವ್ ಮಾಡಿದ್ದ ಬೆಳೆಯನ್ನು ಟ್ರ್ಯಾಕ್ಟರ್ ನಲ್ಲಿ ಸಾಗುತ್ತಿದ್ದ ವೇಳೆ ಹೈಟೆನ್ಶನ್ ವಿದ್ಯುತ್ ವೈರ್ ತಗುಲಿ ಬೆಂಕಿ ಹೊತ್ತಿಕೊಂಡ ಘಟನೆ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನಲ್ಲಿ ನಡೆದಿದೆ.
ಟ್ರ್ಯಾಕ್ಟರ್ ನಲ್ಲಿ ತುಂಬಿದ್ದ ಉತ್ಪನ್ನ ನಡುರಸ್ತೆಯಲ್ಲಿಯೇ ಧಗಧಗನೆ ಹೊತ್ತಿ ಉರಿಯಲಾರಂಭಿಸಿದೆ. ಆದರೂ ಧೃತಿಗೆಡದ ರೈತ ಸಮಯ ಪ್ರಜ್ಞೆ ಮೆರೆದಿದ್ದು, ಟ್ರ್ಯಾಕ್ಟರ್ ನ್ನು ಮುಂದೆಕ್ಕೆ ಚಲಿಸುತ್ತಾ ಟ್ರಾಲಿಯನ್ನು ನಿಧಾನವಾಗಿ ಎತ್ತಿ, ಬೆಂಕಿಯಲ್ಲಿ ಹೊತ್ತಿ ಉರಿಯುತ್ತಿದ್ದ ಉತ್ಪನ್ನವನ್ನು ರಸ್ತೆಗೆ ಕೆಡವಿದ್ದಾರೆ. ಟ್ರ್ಯಾಕ್ಟರ್ ನಲ್ಲಿದ್ದ ಬೆಳೆಯನ್ನೆಲ್ಲ ನೆಲಕ್ಕೆ ಬೀಳುವಂತೆ ಮಾಡಿ ಟ್ರ್ಯಾಕ್ಟರ್ ನ್ನು ರಸ್ತೆ ಪಕ್ಕ ನಿಲ್ಲಿಸಿದ್ದಾರೆ. ರೈತ ಸ್ವಲ್ಪ ಎಚ್ಚರ ತಪ್ಪಿದರೂ ಟ್ರ್ಯಾಕ್ಟರ್ ಸಮೇತ ಬೆಂಕಿಗಾಹುತಿಯಾಗಬೇಕಿತ್ತು. ಟ್ರ್ಯಾಕ್ಟರ್ ನಲ್ಲಿ ಉತ್ಪನ್ನ ಬೆಂಕಿಯಿಂದ ಮುಗಿಲೆತ್ತರಕ್ಕೆ ಹೊತ್ತಿ ಉರಿಯುತ್ತಿದ್ದರೂ ಗಾಬರಿಯಾಗದೇ ಸಮಯಪ್ರಜ್ಞೆ ಮೆರೆದ ರೈತನ ಧೈರ್ಯಕ್ಕೆ ನಿಜಕ್ಕೂ ಮೆಚ್ಚಲೇಬೇಕು.