
ನವದೆಹಲಿ: ಕೃಷಿ ತಿದ್ದುಪಡಿ ಕಾಯ್ದೆ ವಿರೋಧಿಸಿ ರೈತರು ಹೋರಾಟ ಮುಂದುವರಿಸಿದ್ದು, ಜನವರಿ 7 ರಂದು ದೆಹಲಿ ಗಡಿಭಾಗದಲ್ಲಿ ಟ್ರ್ಯಾಕ್ಟರ್ ಗಳಿಂದ ಮುತ್ತಿಗೆ ಹಾಕಲಾಗುವುದು.
ಕಳೆದ ತಿಂಗಳಿಂದ ದೆಹಲಿ ಗಡಿ ಭಾಗದಲ್ಲಿ ನಡೆಯುತ್ತಿರುವ ರೈತರ ಹೋರಾಟ 40 ದಿನಗಳ ನಂತರವೂ ಮುಂದುವರೆದಿದೆ. ಸರ್ಕಾರ ಸ್ಪಂದಿಸದ ಕಾರಣ ಜನವರಿ 26 ರಂದು ದೆಹಲಿಯಲ್ಲಿ ಟ್ರ್ಯಾಕ್ಟರ್ ರ್ಯಾಲಿ ನಡೆಸಲು ನಿರ್ಧರಿಸಲಾಗಿತ್ತು.
ಆದರೆ, ನಿನ್ನೆ ನಡೆದ ಮಾತುಕತೆ ಫಲಪ್ರದವಾಗದ ಹಿನ್ನೆಲೆಯಲ್ಲಿ ಜನವರಿ 7 ರಂದೇ ದೆಹಲಿ ಗಡಿಭಾಗದಲ್ಲಿ ಟ್ರ್ಯಾಕ್ಟರ್ ಗಳೊಂದಿಗೆ ಮುತ್ತಿಗೆ ಹಾಕಲಾಗುವುದು ಎಂದು ಹೋರಾಟಗಾರ ಯೋಗೇಂದ್ರ ಯಾದವ್ ಅವರು ಮಾಹಿತಿ ನೀಡಿದ್ದಾರೆ.