ಮೆಕ್ ಡೊನಾಲ್ಡ್, ಬರ್ಗರ್ ಕಿಂಗ್ ಮತ್ತು ಪಿಜ್ಜಾ ಹಟ್ ಆಹಾರಗಳಲ್ಲಿ ಡಿಟರ್ಜೆಂಟ್ ಗಳಲ್ಲಿ ಬಳಸುವ ರಾಸಾಯನಿಕ ಕಂಡುಬಂದಿವೆ.
ಹೊಸ ಅಧ್ಯಯನವೊಂದು ಈ ಆಘಾತಕಾರಿ ಮಾಹಿತಿಯನ್ನು ಹೊರಹಾಕಿದೆ. ಸಂಶೋಧನೆಯಲ್ಲಿ ಕಂಡು ಬಂದ ಮಾಹಿತಿ ಪ್ರಕಾರ, ಮೆಕ್ ಡೊನಾಲ್ಡ್, ಬರ್ಗರ್ ಕಿಂಗ್ ಮತ್ತು ಪಿಜ್ಜಾ ಹಟ್ ಆಹಾರಗಳಲ್ಲಿ ಡಿಟರ್ಜೆಂಟ್ ಗಳಲ್ಲಿ ಬಳಸುವ ರಾಸಾಯನಿಕ ಕಂಡುಬಂದಿದೆ.
ಫಾಸ್ಟ್ ಫುಡ್ ಗಳ ಬಗ್ಗೆ ತಜ್ಞರು ಮೊದಲಿನಿಂದಲೂ ತಜ್ಞರು ಎಚ್ಚರಿಕೆ ನೀಡುತ್ತಿದ್ದಾರೆ. ಜರ್ನಲ್ ಆಫ್ ಎಕ್ಸ್ ಪೋಸರ್ ಸೈನ್ಸ್ ಮತ್ತು ಎನ್ವಿರಾನ್ಮೆಂಟಲ್ ಎಪಿಡೆಮಿಯಾಲಜಿಯಲ್ಲಿ ಪ್ರಕಟವಾದ ಅಧ್ಯಯನ ವರದಿಯಲ್ಲಿ ಮೆಕ್ ಡೊನಾಲ್ಡ್ಸ್, ಬರ್ಗರ್ ಕಿಂಗ್, ಪಿಜ್ಜಾ ಹಟ್, ಡೊಮಿನೋಸ್ ಮತ್ತು ಟ್ಯಾಕೋ ಬೆಲ್‌ನಂತಹ ಜನಪ್ರಿಯ ರೆಸ್ಟೋರೆಂಟ್ ಆಹಾರಗಳಲ್ಲಿ ಪ್ಲಾಸ್ಟಿಕ್ ಅನ್ನು ಮೃದುವಾಗಿಡುವ ‘ಥಾಲೇಟ್ಸ್’ ಎಂಬ ವಸ್ತುವನ್ನು ಕಂಡು ಬಂದಿರುವುದಾಗಿ ಮಾಹಿತಿ ನೀಡಲಾಗಿದೆ.
ಜಂಕ್ ಫುಡ್ ಮೆದುಳಿನ ಆರೋಗ್ಯ ವೇಗವಾಗಿ ಕ್ಷೀಣಿಸಲು ಕಾರಣವಾಗುತ್ತದೆ ಎನ್ನುತ್ತದೆ ಅಧ್ಯಯನದ ಮಾಹಿತಿ. ಪ್ಲಾಸ್ಟಿಕ್‌ಗಳಿಗೆ ಸೇರಿಸಲಾದ ಪ್ಲಾಸ್ಟಿಸೈಜರ್‌ಗಳಾಗಿ ಥಾಲೇಟ್‌ಗಳನ್ನು ಮುಖ್ಯವಾಗಿ ಬಳಸಲಾಗುತ್ತದೆ. ವಿನೈಲ್ ಫ್ಲೋರಿಂಗ್, ಲೂಬ್ರಿಕೇಟಿಂಗ್ ಆಯಿಲ್‌ಗಳು, ಸಾಬೂನುಗಳು, ಹೇರ್ ಸ್ಪ್ರೇಗಳು, ಲಾಂಡ್ರಿ ಡಿಟರ್ಜೆಂಟ್ ಇತ್ಯಾದಿಗಳನ್ನು ಒಳಗೊಂಡಂತೆ ಅನೇಕ ಉತ್ಪನ್ನಗಳಲ್ಲಿ ಅವುಗಳನ್ನು ಬಳಸಲಾಗುತ್ತದೆ. ಇಂತಹವುಗಳನ್ನು ಆಹಾರ ಮೃದು, ಬಾಳಿಕೆ ಮತ್ತು ಬಹುಕಾಲ ಕೆಡದಂತೆ ಇಡಲು ಬಳಕೆ ಮಾಡಲಾಗುವುದು.
ಜಾರ್ಜ್ ವಾಷಿಂಗ್ಟನ್ ವಿಶ್ವವಿದ್ಯಾಲಯ, ಸೌತ್‌ವೆಸ್ಟ್ ರಿಸರ್ಚ್ ಇನ್‌ಸ್ಟಿಟ್ಯೂಟ್(ಸ್ಯಾನ್ ಆಂಟೋನಿಯೊ, ಟೆಕ್ಸಾಸ್), ಬೋಸ್ಟನ್ ವಿಶ್ವವಿದ್ಯಾಲಯ ಮತ್ತು ಹಾರ್ವರ್ಡ್ ವಿಶ್ವವಿದ್ಯಾಲಯದ ಸಂಶೋಧಕರು ಈ ಮಳಿಗೆಗಳಿಂದ ತೆಗೆದ ಹ್ಯಾಂಬರ್ಗರ್‌ಗಳು, ಫ್ರೈಗಳು, ಚಿಕನ್ ಫುಡ್ ಗಳು, ಚಿಕನ್ ಬರ್ರಿಟೊಗಳು ಮತ್ತು ಚೀಸ್ ಪಿಜ್ಜಾದ 64 ಮಾದರಿಗಳನ್ನು ಪರಿಶೀಲಿಸಿದ್ದಾರೆ.
ವರದಿಯ ಪ್ರಕಾರ, ಶೇಕಡ 80 ಕ್ಕಿಂತ ಹೆಚ್ಚು ಆಹಾರದಲ್ಲಿ DnBP ಎಂಬ ಥಾಲೇಟ್ ಮತ್ತು ಶೇಕಡ 70 ರಷ್ಟು ಥಾಲೇಟ್ DEHT ಇರುವುದು ಕಂಡುಬಂದಿದೆ. DEHT ಎರಡರಲ್ಲೂ ಹೆಚ್ಚು ವಿಷಕಾರಿ ರಾಸಾಯನಿಕಗಳನ್ನು ಬದಲಿಸಲು ಪರಿಚಯಿಸಲಾದ ಪ್ಲಾಸ್ಟಿಸೈಜರ್ ಆಗಿದೆ, ಸಿಬ್ಬಂದಿ ಬಳಸುವ ಕೈಗವಸುಗಳು ಮತ್ತು ಆಹಾರ ಇದನ್ನು ಬಾಟಲ್ ಕ್ಯಾಪ್‌ಗಳು, ಕನ್ವೇಯರ್ ಬೆಲ್ಟ್ ಗಳು, ಫ್ಲೋರಿಂಗ್ ವಸ್ತುಗಳು ಮತ್ತು ಜಲನಿರೋಧಕ ಬಟ್ಟೆಗಳಲ್ಲಿ ಬಳಸಲಾಗುತ್ತದೆ ಎನ್ನಲಾಗಿದ.
ಸಂಶೋಧಕರು ಟೆಕ್ಸಾಸ್‌ನಲ್ಲಿರುವ ತಮ್ಮ ಪ್ರಯೋಗಾಲಯದಲ್ಲಿ ಬಳಸಲಾದ ಮೂರು ಜೊತೆ ಕೈಗವಸುಗಳನ್ನು ಸಹ ಅಧ್ಯಯನ ಮಾಡಿದರು. ಅಧ್ಯಯನದಲ್ಲಿ ಮಕ್ಕಳ ಕಲಿಕೆ, ಗಮನ ಮತ್ತು ನಡವಳಿಕೆಯ ಸಮಸ್ಯೆಗಳಂತಹ ಹೆಚ್ಚಿನ ಅಪಾಯಗಳಿಗೆ ಥಾಲೇಟ್ ಕಾರಣವಾಗುತ್ತಿರುವುದು ಗೊತ್ತಾಗಿದೆ. ಇದಕ್ಕೆ ಸಂಬಂಧಿಸಿತೆ ಗಣನೀಯ ಪುರಾವೆಗಳು ಕಂಡುಬಂದಿವೆ ಎಂಬುದನ್ನು ಸಂಶೋಧಕರು ಉಲ್ಲೇಖಿಸಿದ್ದಾರೆ. ಇದು ಗರ್ಭಿಣಿಯರು ಮತ್ತು ಜನರ ಮೇಲೂ ಪರಿಣಾಮ ಬೀರಬಹುದು. ಆದಾಗ್ಯೂ, ಅಧ್ಯಯನವು ಸೀಮಿತವಾಗಿದೆ ಎಂದು ಸಂಶೋಧಕರು ಹೇಳಿದ್ದು, ಆಹಾರ ಪದಾರ್ಥಗಳು ಕೇವಲ ಒಂದು ನಗರದಿಂದ ಬಂದವು ಎಂದು ಒಪ್ಪಿಕೊಳ್ಳುತ್ತಾರೆ. ಮತ್ತೊಂದೆಡೆ, ಆಹಾರ ಮತ್ತು ಔಷಧ ಆಡಳಿತ(ಎಫ್ಡಿಎ) ಅಧ್ಯಯನದ ಬಗ್ಗೆ ಪರಿಶೀಲಿಸುವುದಾಗಿ ಹೇಳಿದೆ.