ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್ ಹೈಬ್ರಿಡ್ SUV ಹಲವಾರು ವೈಶಿಷ್ಟ್ಯಗಳೊಂದಿಗೆ ಭಾರತೀಯ ಮಾರುಕಟ್ಟೆಗೆ ಬಿಡುಗಡೆಗೊಂಡಿದೆ.
ಹೈಬ್ರಿಡ್ ಪವರ್‌ಟ್ರೇನ್:
ನಿಯೋ ಡ್ರೈವ್ ಸೇರಿದಂತೆ ಅದರ ಪವರ್‌ಟ್ರೇನ್ ಮತ್ತು ಸೆಲ್ಫ್- ಚಾರ್ಜಿಂಗ್ ಸ್ಟ್ರಾಂಗ್ ಹೈಬ್ರಿಡ್ ಎಲೆಕ್ಟ್ರಿಕ್ ಪವರ್‌ಟ್ರೇನ್ ಆಯ್ಕೆಗಳಾಗಿರುತ್ತದೆ.
ನಿಯೋ ಡ್ರೈವ್ 75kW 1.5- ಲೀಟರ್ ಪೆಟ್ರೋಲ್ ಎಂಜಿನ್ ಇಂಟಿಗ್ರೇಟೆಡ್ ಸ್ಟಾರ್ಟರ್ ಜನರೇಟರ್ ತಂತ್ರಜ್ಞಾನ ಬಳಸಲಾಗಿದೆ. ಸಿಕ್ಸ್ ಸ್ಪೀಡ್ ಆಟೋಮ್ಯಾಟಿಕ್ ಮತ್ತು ಫೈ ಮ್ಯಾನ್ಯುಯಲ್ ಟ್ರಾನ್ಸ್‌ಮಿಷನ್ ಆಯ್ಕೆ ಮಾಡಲು ಗ್ರಾಹಕರಿಗೆ ಅವಕಾಶವಿದೆ.
ಸೆಲ್ಫ್ ಚಾರ್ಜಿಂಗ್ ಪವರ್‌ಫುಲ್ ಹೈಬ್ರಿಡ್- ಎಲೆಕ್ಟ್ರಿಕ್ ಮಾದರಿಗಳು 1.5 ಲೀಟರ್ ಗ್ಯಾಸೋಲಿನ್ ಎಂಜಿನ್ ಎಲೆಕ್ಟ್ರಿಕ್ ಡ್ರೈವ್ ಟ್ರಾನ್ಸ್‌ಮಿಷನ್‌ನೊಂದಿಗೆ ಲಭ್ಯ, ಇದು 68 kW ನ ಎಂಜಿನ್ ಔಟ್‌ಪುಟ್ ಮತ್ತು 59 kW ನ ಮೋಟಾರ್ ಔಟ್‌ಪುಟ್ ಇರಲಿದೆ.
ಆಲ್-ವೀಲ್-ಡ್ರೈವ್:
ಆಲ್- ವೀಲ್- ಡ್ರೈವ್ ಸಿಸ್ಟಮ್ ಕಠಿಣವಾದ ಭೂಪ್ರದೇಶದಲ್ಲೂ ನ್ಯಾವಿಗೇಟ್ ಮಾಡುವ ಸಾಮರ್ಥ್ಯ ಇರಲಿದೆ. ಈ ವ್ಯವಸ್ಥೆಯು SUVಗೆ ಭಾರತೀಯ ಮಾರುಕಟ್ಟೆಯಲ್ಲಿ ಅದರ ಪ್ರತಿಸ್ಪರ್ಧಿಗಳಿಗಿಂತ ಹೆಚ್ಚು ಬಲ ನೀಡುತ್ತದೆ.
ಹೆಡ್- ಅಪ್- ಡಿಸ್ಪ್ಲೇ:
ಹೊಸದಾಗಿ ಬಿಡುಗಡೆಯಾದ ಬ್ರೆಝಾದೊಂದಿಗೆ ಹೈರೈಡರ್ ಹೋಲಿಕೆ ಮಾಡಬಹುದಾಗಿದೆ. ಬ್ರೆಝಾದಂತೆ ಹೆಡ್ ಅಪ್ ಡಿಸ್‌ಪ್ಲೇಯು ಹೊಂದಿದೆ.
ಸನ್ ರೂಫ್:
ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಕಾರುಗಳು ಎಲೆಕ್ಟ್ರಿಕ್ ಅಥವಾ ಪನೋರಮಿಕ್ ಸನ್‌ರೂಫ್‌ಗಳನ್ನು ಹೊಂದಿರುತ್ತವೆ. ಅರ್ಬನ್ ಕ್ರೂಸರ್ ಹೈರೈಡರ್ ಈಗ ಸ್ಪರ್ಧೆಯಲ್ಲಿ ಉಳಿಯಲು ಅದೇ ದಾರಿ ಕಂಡುಕೊಂಡಿದೆ.
ಸುರಕ್ಷತಾ ವೈಶಿಷ್ಟ್ಯ:
ಕಾರಿನ ಸುರಕ್ಷತಾ ವೈಶಿಷ್ಟ್ಯಗಳ ಬಗ್ಗೆ ಸಾಕಷ್ಟು ಗಮನ ಹರಿಸಲಾಗಿದೆ. ಇದು ಆರು ಏರ್‌ಬ್ಯಾಗ್‌ಗಳು, ಇಬಿಡಿ ಜೊತೆಗೆ ಎಬಿಎಸ್ ಮತ್ತು ಇತರ ವೈಶಿಷ್ಟ್ಯಗಳು ವಾಹನ ಸ್ಥಿರತೆಗೆ ಸಹಕಾರಿಯಾಗಿದೆ
ವೆಂಟಿಲೇಟೆಡ್ ಸೀಟ್:
ಈ ವೈಶಿಷ್ಟ್ಯವನ್ನು ಹೆಚ್ಚಿನ ಎಸ್‌ಯುವಿಗಳು ಹೊಂದಿಲ್ಲ. ಎದುರಾಳಿ ಸ್ಪರ್ಧೆಯನ್ನು ಹಿಂದಿಕ್ಕಲು ಗ್ರಾಹಕರಿಗೆ ಈ ವೈಶಿಷ್ಟ್ಯವನ್ನು ನೀಡುತ್ತಿದೆ.