ಟೊಯೋಟಾ ಕಿರ್ಲೋಸ್ಕರ್ ಮೋಟಾರ್ (ಟಿಕೆಎಂ) 2025ರಲ್ಲಿಯೂ ತನ್ನ ಮಾರಾಟ ಸಾಧನೆಯನ್ನು ಮುಂದುವರಿಸಿದ್ದು, 2024ರ ಜನವರಿಯಲ್ಲಿ ಮಾರಾಟವಾದ 24,609 ಯುನಿಟ್ ಗಳಿಗೆ ಹೋಲಿಸಿದರೆ ಜನವರಿ 2025ರಲ್ಲಿ 29,371 ಯುನಿಟ್ ಗಳನ್ನು ಮಾರಾಟ ಮಾಡಿದೆ. ಈ ಮೂಲಕ ಶೇ.19ರಷ್ಟು ಮಾರಾಟ ಬೆಳವಣಿಗೆ ದಾಖಲಿಸಿದೆ. ಕಂಪನಿಯು ಒಟ್ಟಾರೆ ದೇಶೀಯ ಮಾರುಕಟ್ಟೆಯಲ್ಲಿ 26,178 ಯುನಿಟ್ ಗಳನ್ನು ಮಾರಾಟ ಮಾಡಿದೆ ಮತ್ತು 3,193 ಯುನಿಟ್ ಗಳನ್ನು ರಫ್ತು ಮಾಡಿದೆ.
ಈ ಮಾರಾಟ ಸಾಧನೆಯು ಟಿಕೆಎಂ ಸಂಸ್ಥೆಯ ಗ್ರಾಹಕ ಕೇಂದ್ರಿತ ವಿಧಾನ, ದೇಶಾದ್ಯಂತ ಇರುವ ಗ್ರಾಹಕರಿಗೆ ಹೆಚ್ಚಿದ ಲಭ್ಯತೆ ಮತ್ತು ನವೀನ ಮೌಲ್ಯವರ್ಧಿತ ಉತ್ಪನ್ನಗಳಿಗೆ ಹೆಚ್ಚಿರುವ ಬೇಡಿಕೆಗೆ ಸಾಕ್ಷಿಯಾಗಿದೆ.
ಈ ಕುರಿತು ಮಾತನಾಡಿರುವ ಟಿಕೆಎಂನ ಸೇಲ್ಸ್ ಸರ್ವೀಸ್ ಯೂಸ್ಡ್ ಕಾರ್ ಬಿಸಿನೆಸಿ ಮತ್ತು ಲಾಭ ವರ್ಧನೆ ವಿಭಾಗದ ಉಪಾಧ್ಯಕ್ಷರಾದ ವರೀಂದರ್ ವಾಧ್ವಾ ಅವರು, “ಹೊಸ ವರ್ಷವನ್ನು ಸಕಾರಾತ್ಮಕವಾಗಿ ಆರಂಭಿಸಿದ್ದೇವೆ. ಕಳೆದ ವರ್ಷದ ಟ್ರೆಂಡ್ ಈ ವರ್ಷವೂ ಮುಂದುವರಿದಿದ್ದು, 2025ರಲ್ಲಿಯೂ ಬೆಳವಣಿಗೆ ಸಾಧಿಸುವುದು ಮುಂದುವರಿಸಿದ್ದೇವೆ. ಹೊಸದಾಗಿ ಬಿಡುಗಡೆ ಮಾಡಲಾದ ಹೊಚ್ಚ ಹೊಸ ಕ್ಯಾಮ್ರಿ ಹೈಬ್ರಿಡ್ ಸೇರಿದಂತೆ ನಮ್ಮ ಎಲ್ಲಾ ಉತ್ಪನ್ನ ಶ್ರೇಣಿಗೆ ನಮ್ಮ ಗ್ರಾಹಕರು ಸಕಾರಾತ್ಮಕ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಅದಕ್ಕಾಗಿ ನಾನು ಗ್ರಾಹಕರಿಗೆ ಕೃತಜ್ಞನಾಗಿದ್ದೇನೆ” ಎಂದು ಹೇಳಿದ್ದಾರೆ
ಜನವರಿ 2025ರಲ್ಲಿ ಟಿಕೆಎಂ ತನ್ನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾದ ಟೊಯೋಟಾ ಮೊಬಿಲಿಟಿ ಸೊಲ್ಯೂಷನ್ಸ್ ಆಂಡ್ ಸರ್ವೀಸಸ್ ಲಿಮಿಟೆಡ್ (ಟಿಎಂಎಸ್ಎಸ್) ಇಂಡಿಯಾವನ್ನು ಪ್ರಾರಂಭಿಸಿದೆ. ಈ ಮೂಲಕ ಭಾರತದ ಬಳಸಿದ ಕಾರುಗಳ ಮಾರುಕಟ್ಟೆಯಲ್ಲಿ ಸಂಚಲನ ಉಂಟು ಮಾಡುವ ಉದ್ದೇಶ ಹೊಂದಿದೆ. ಟಿಎಂಎಸ್ಎಸ್ ಟೊಯೋಟಾದ ಗುಣಮಟ್ಟ, ಬಾಳಿಕೆ ಮತ್ತು ವಿಶ್ವಾಸಾರ್ಹತೆಯ ಮೌಲ್ಯಗಳನ್ನು ಎತ್ತಿಹಿಡಿಯಲಿದ್ದು, ಹೊಸ ಮತ್ತು ಬಳಸಿದ ಕಾರುಗಳ ವಿಭಾಗಗಳಾದ್ಯಂತ ಅಸಾಧಾರಣ ಉತ್ಪನ್ನಗಳು ಮತ್ತು ಸೇವೆಗಳನ್ನು ಒದಗಿಸುತ್ತದೆ.