ಟಯೋಟಾ ಕಿರ್ಲೋಸ್ಕರ್ ಮೋಟಾರ್ ಭಾರತದಲ್ಲಿ ಕ್ಯಾಮ್ರಿ ಹೈಬ್ರಿಡ್‌ನ ಲೇಟೆಸ್ಟ್ ವರ್ಷನ್ ಅನ್ನು ಬಿಡುಗಡೆ ಮಾಡಿದೆ. ಈ ಹೊಸ ಕ್ಯಾಮ್ರಿ ವರ್ಷನ್ ಗೆ ಜಪಾನ್ ಮೂಲದ ಕಂಪನಿ 41.70 ಲಕ್ಷ ರೂ.(ಎಕ್ಸ್ ಶೋ ರೂಂ) ಕೋಟ್ ಮಾಡಿದೆ. ನಾಲ್ಕು ಬಾಗಿಲಿನ ಸೆಡಾನ್ ಗೆ ಈಗ ರೂ. 50,000 ಪ್ರೀಮಿಯಂಗೆ ಬೇಡಿಕೆಯಿದ್ದು, ಪ್ರತಿಯಾಗಿ ಸೂಕ್ಷ್ಮವಾದ ಬಾಹ್ಯ ಟ್ವೀಕ್‌ಗಳು, ಹೆಚ್ಚಿನ ತಂತ್ರಜ್ಞಾನ ಮತ್ತು ಹೊಸ ಲುಕ್ ನೀಡಲಾಗಿದೆ.
ಹೈಬ್ರಿಡ್ ವರ್ಷನ್ ಹೊಸದಾದರೂ ಫ್ರಂಟ್ ಬಂಪರ್ ಹೊರಭಾಗದಲ್ಲಿ ಪ್ರಸ್ತುತ ಟಯೋಟಾ ಕ್ಯಾಮ್ರಿ ಮಾದರಿಯ ಶೆಲ್ ಅನ್ನೇ ಮುಂದುವರೆಸಲಾಗಿದೆ. ಕ್ರೋಮ್ ಇನ್ಸರ್ಟ್ ಪಡೆದಿರುವ, ಮುಂಭಾಗದ ಬಂಪರ್‌ನಲ್ಲಿರುವ ಸಮತಲವಾದ ಸ್ಲ್ಯಾಟ್‌ಗಳು ಈಗ ಹೆಚ್ಚು ಪ್ರಾಮುಖ್ಯತೆಯನ್ನು ಪಡೆದಿದ್ದು, ಇವುಗಳನ್ನೇ ಹೈಲೈಟ್ ಮಾಡಲಾಗಿದೆ. ಎರಡು ಬಣ್ಣದ ವಿನ್ಯಾಸ ಹೊಂದಿರುವ 18-ಇಂಚಿನ ಚಕ್ರಗಳು ಈ ವರ್ಷನ್ ನ ಹೊಸ ಎಡಿಷನ್. ಕಪ್ಪು ಬೇಸ್ ವಿಸ್ತರಣೆಯೊಂದಿಗೆ, ಎಲ್ಇಡಿ ಟೈಲ್ ಲ್ಯಾಂಪ್‌ಗಳನ್ನ ತೀಕ್ಷ್ಣಗೊಳಿಸಲಾಗಿದೆ. ಕ್ಯಾಮ್ರಿ ಈಗ ಹೊಸ ಮೆಟಾಲಿಕ್ ಬಣ್ಣಗಳಲ್ಲಿ ಲಭ್ಯವಿದೆ
ಕ್ಯಾಮ್ರಿಯ ಕ್ಯಾಬಿನ್‌ನ ಒಳಗಡೆ, ಡ್ಯಾಶ್‌ಬೋರ್ಡ್ ಅನ್ನು Y-ವಿನ್ಯಾಸ ಮಾದರಿಯಲ್ಲಿ ನೀಡುವುದನ್ನು ಮುಂದುವರೆಸಿದ್ದು, ಬ್ಲಾಕ್ ವುಡನ್ ವಿನ್ಯಾಸವು ಕಾರ್ ಇಂಟೀರಿಯರ್ ನ ಛಾಯೆಯನ್ನ ಹೆಚ್ಚಿಸಿದೆ. ಒಂಭತ್ತು ಇಂಚಿನ ಟಚ್‌ಸ್ಕ್ರೀನ್ ಸಿಸ್ಟಮ್ ಅನ್ನು ಡ್ಯಾಶ್ ಬೋರ್ಡ್ ಮೇಲೆ ಅಳವಡಿಸಲಾಗಿದ್ದು, ಆಂಡ್ರಾಯ್ಡ್ ಮತ್ತು ಆಪಲ್ ಆಟೋ ಕಾರ್‌ಪ್ಲೇ ಹೊಂದಿದೆ. ಕ್ಯಾಮ್ರಿ ಹೈಬ್ರಿಡ್ ಗೆ ಮತ್ತೊಂದು ಗಮನಾರ್ಹ ಸೇರ್ಪಡೆಯೆಂದರೆ ಒಂಬತ್ತು-ಸ್ಪೀಕರ್ ನ JBL ಸ್ಟಿರಿಯೊ ಸಿಸ್ಟಮ್.
ಕ್ಯಾಮ್ರಿ ಅಸ್ತಿತ್ವದಲ್ಲಿರುವ ವೈಶಿಷ್ಟ್ಯಗಳಾದ 10-ವೇ ಎಲೆಕ್ಟ್ರಿಕಲ್-ಹೊಂದಾಣಿಕೆ ಚಾಲಕ ಸೀಟ್, ವೈರ್‌ಲೆಸ್ ಚಾರ್ಜರ್, ಹೆಡ್-ಅಪ್ ಡಿಸ್ಪ್ಲೇ, ಕ್ಲೈಮೇಟ್ ಕಂಟ್ರೋಲ್ ಮತ್ತು ಎಲೆಕ್ಟ್ರಿಕ್ ಸನ್‌ರೂಫ್‌ನೊಂದಿಗೆ ಮುಂದುವರಿಯುತ್ತದೆ. ಹಿಂದಿನ ವರ್ಷನ್ ನಂತೆ ಕ್ಯಾಮ್ರಿ ಅದೇ ಪೆಟ್ರೋಲ್-ಹೈಬ್ರಿಡ್ ಪವರ್‌ಟ್ರೇನ್‌ನಿಂದ ಚಾಲಿತವಾಗುತ್ತದೆ. 2.5-ಲೀಟರ್, ನಾಲ್ಕು-ಸಿಲಿಂಡರ್, ಗ್ಯಾಸೋಲಿನ್ ಮೋಟಾರ್ ಒಟ್ಟು 215bhp ಮತ್ತು 221Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸಲು ಎಲೆಕ್ಟ್ರಿಕ್ ಮೋಟರ್‌ನೊಂದಿಗೆ ಒಟ್ಟಾಗಿ ಕಾರ್ಯನಿರ್ವಹಿಸುತ್ತದೆ. CVT ಗೇರ್ ಬಾಕ್ಸ್ ಮೂಲಕ ವಿದ್ಯುತ್ ಅನ್ನು ಮುಂಭಾಗದ ಚಕ್ರಕ್ಕೆ ಕಳುಹಿಸಲಾಗುತ್ತದೆ.