ಚಿಕ್ಕಬಳ್ಳಾಪುರ : ಏ.25 ರವರೆಗೂ ಪ್ರವಾಸಿ ತಾಣ ನಂದಿ ಬೆಟ್ಟಕ್ಕೆ ವಾಹನ ಸಂಚಾರ ನಿರ್ಬಂಧಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.
ನಂದಿಗಿರಿಧಾಮದ ಮೋಟಾರು ರಸ್ತೆಯ ಸರಪಳಿಯಿಂದ 7.70 ಕಿಮೀವರೆಗಿನ ರಸ್ತೆ ನವೀಕರಣ ಕಾಮಗಾರಿಯ ಕಾರ್ಯವನ್ನು ಕೈಗೊಳ್ಳುವ ಹಿನ್ನೆಲೆ ಮಾ.24 ರಿಂದ ಏಪ್ರಿಲ್ 25 ರವರೆಗೆ ವಾಹನ ಸಂಚಾರವನ್ನು ನಿರ್ಬಂಧಿಸಿ ಜಿಲ್ಲಾಧಿಕಾರಿ ಪಿಎನ್ ರವೀಂದ್ರ ಆದೇಶ ಹೊರಡಿಸಿದ್ದಾರೆ.
ವಾರಂತ್ಯದ ದಿನಗಳಲ್ಲಿ ಮಾತ್ರ ಈ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಶುಕ್ರವಾರ ಸಂಜೆ 6.30ಗಂಟೆಯಿಂದ ಸೋಮವಾರ ಬೆಳಿಗ್ಗೆ 8 ಗಂಟೆಯ ವರೆಗಿನ ಅವಧಿಯನ್ನು ಹೊರತುಪಡಿಸಿ ಉಳಿದ ದಿನಗಳಲ್ಲಿ ಸಾರ್ವಜನಿಕರ ವಾಹನ ಸಂಚಾರವನ್ನು ನಿರ್ಬಂಧಿಸಿ ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ಅವರು ಆದೇಶ ಹೊರಡಿಸಿದ್ದಾರೆ.