ವಿದೇಶಿ ಪ್ರವಾಸ ಎಂದಾಗ ಮೊದಲು ನೆನಪಾಗುವುದು ಯುರೋಪ್. ಇಲ್ಲಿನ ಸುಂದರ, ರಮಣೀಯ ಸ್ಥಳಗಳು, ಪ್ರವಾಸಿಗರನ್ನು ಸೆಳೆಯುತ್ತವೆ. ಆದ್ರೆ ಇತ್ತೀಚಿನ ದಿನಗಳಲ್ಲಿ ಇಲ್ಲಿಗೆ ಬರ್ತಿರುವ ಅತಿ ಹೆಚ್ಚು ಪ್ರವಾಸಿಗರು, ಅಲ್ಲಿನ ಸೌಂದರ್ಯಕ್ಕೆ ಧಕ್ಕೆ ತರುತ್ತಿದ್ದಾರೆ. ಅಲ್ಲಿನ ಸಂಸ್ಕೃತಿ, ಸಂಪ್ರದಾಯಕ್ಕೆ ಹಾನಿಯಾಗ್ತಿದೆ. ಐತಿಹಾಸಿಕ ಸ್ಥಳಗಳನ್ನು ಪ್ರವಾಸಿಗರು ಕೊಳಕು ಮಾಡ್ತಿದ್ದಾರೆ. ಸುಂದರ ಬೀಚ್ ಗಳು ಸೆಕ್ಸ್ ತಾಣಗಳಾಗಿ ಮಾರ್ಪಡುತ್ತಿವೆ.
ಜರ್ನಲ್ ಆಫ್ ಎನ್ವಿರಾನ್ಮೆಂಟಲ್ ಮ್ಯಾನೇಜ್‌ಮೆಂಟ್‌ನಲ್ಲಿನ ಅಧ್ಯಯನದ ಪ್ರಕಾರ, ಗ್ರ್ಯಾನ್ ಕೆನರಿಯಾ ದ್ವೀಪ ಪ್ರವಾಸಿಗರಿಂದ ಹಾಳಾಗ್ತಿದೆ. 298ಕ್ಕೂ ಹೆಚ್ಚು ಸೆಕ್ಸ್ ಸ್ಪಾಟ್ ಗಳನ್ನು ಪತ್ತೆ ಮಾಡಲಾಗಿದೆ. ಪೊದೆ ಹಾಗೂ ದಿಬ್ಬಗಳನ್ನು ಸೆಕ್ಸ್ ಸ್ಪಾಟ್ ಮಾಡಿಕೊಳ್ಳಲಾಗಿದೆ. ಇದ್ರಿಂದ ಪ್ರಜಾತಿ ಗಿಡಗಳಿಗೆ ಹಾನಿಯಾಗ್ತಿದೆ. ಪ್ರವಾಸಿಗರು, ಸಸ್ಯ, ಮರಗಳನ್ನು ಕಡಿದು, ಅದನ್ನು ಲೈಂಗಿಕ ತಾಣ ಮಾಡಿಕೊಂಡಿದ್ದಾರೆಂದು ಅಧ್ಯಯನದ ವರದಿಯಲ್ಲಿ ಹೇಳಲಾಗಿದೆ.
ಅದಲ್ಲದೇ ಅದೇ ಜಾಗದಲ್ಲಿ ಸಿಗರೇಟ್, ಕಾಂಡೋಮ್, ಟಾಯ್ಲೆಟ್ ಪೇಪರ್ ಸೇರಿದಂತೆ ಕಸವನ್ನು ಹಾಕ್ತಿದ್ದಾರೆ. ಪ್ರವಾಸಿಗರು, ದಿಬ್ಬಗಳನ್ನು ಟಾಯ್ಲೆಟ್ ರೂಪದಲ್ಲೂ ಬಳಸ್ತಿದ್ದಾರೆ. 1982ರಲ್ಲಿ ಇಲ್ಲಿನ ಮರಳನ್ನು ಕಾನೂನು ರೂಪದಲ್ಲಿ ಸಂರಕ್ಷಿಸಲಾಗ್ತಿದೆ. ಯುರೋಪ್ ಮತ್ತು ಆಫ್ರಿಕಾ ಮಧ್ಯೆಯಿರುವ ಈ ದ್ವೀಪ ಆಕರ್ಷಕವಾಗಿದೆ. ಆದ್ರೆ ಪ್ರವಾಸಿಗರ ಕಾರಣ, ದ್ವೀಪದ ಸೌಂದರ್ಯ ಹಾಳಾಗ್ತಿದೆ.
ಗ್ರೇನ್ ಕೆನರಿಯಾದ ದೈತ್ಯ ಹಲ್ಲಿಯನ್ನು ನೋಡಲು ದೂರದೂರುಗಳಿಂದ ಜನರು ಇಲ್ಲಿಗೆ ಬರ್ತಾರೆ. ಸಲಿಂಗಕಾಮಿಗಳಿಗೂ ಇದು ಅಚ್ಚುಮೆಚ್ಚಿನ ಜಾಗ. ಅಮೆರಿಕಾ, ಯುಕೆ, ಜರ್ಮನ್ ಗಳಿಂದ ಜನರು ಇಲ್ಲಿಗೆ ಬರ್ತಾರೆ. ಪ್ರವಾಸಿಗರಿಂದ ಇಲ್ಲಿನ ಪರಿಸರ ಹಾಳಾಗ್ತಿದೆ. ಸಾರ್ವಜನಿಕ ಸೆಕ್ಸ್ ಗೆ ಅನುಮತಿ ನೀಡಬೇಡಿ ಎಂದು ನಾವು ಹೇಳುವುದಿಲ್ಲ. ಆದ್ರೆ ಪರಿಸರ ರಕ್ಷಣೆಗೂ ಮಹತ್ವ ನೀಡಿ ಎಂದು ಅಧ್ಯಯನದಲ್ಲಿ ಹೇಳಲಾಗಿದೆ.