
ಚೆನ್ನೈ: ಫ್ರೆಂಚ್ ಪ್ರವಾಸಿ ಮಹಿಳೆಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ವೆಸಗಿರಿವ ಆರೋಪದಲ್ಲಿ ಪ್ರವಾಸಿ ಮಾರ್ಗದರ್ಶಿ ಓರ್ವನನ್ನು ಬಂಧಿಸಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
ವೆಂಕಟೇಶ್ (42) ಬಂಧಿತ ಆರೋಪಿ. ಫ್ರೆಂಚ್ ಮೂಲದ ಮಹಿಳೆಯೊಬ್ಬರನ್ನು ಅರುಣಾಚಲ ಬೆಟ್ಟದ ತುದಿಗೆ ಧ್ಯಾನಕ್ಕಾಗಿ ಕರೆದೊಯ್ದು ಅಲ್ಲಿ ಲೈಂಗಿಕ ದೌರ್ಜನ್ಯವೆಸಗಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
ಘಟನೆ ವೇಳೆ ಮಹಿಳೆ ಕಿರುಚುತ್ತಿದ್ದಂತೆ ಹತ್ತಿರವೇ ಹಾದುಹೋಗುತ್ತಿದ್ದ ಭಕ್ತರು ಮಹಿಳೆಯನ್ನು ರಕ್ಷಿಸಿದ್ದಾರೆ. ಘಟನೆ ಬಗ್ಗೆ ಮಹಿಳೆ ಫ್ರೆಂಚ್ ಕಾನ್ಸುಲೇಟ್ ಗೆ ಮಾಹಿತಿ ನೀಡಿದ್ದು, ಮಹಿಳಾ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಜನವರಿಯಲ್ಲಿ ಮಹಿಳೆ ಆಧ್ಯಾತ್ಮ ಪ್ರವಾಸಕ್ಕಾಗಿ ಭಾರತಕ್ಕೆ ಭೇಟಿ ನಿಡಿದ್ದರು. ಈ ವೇಳೆ ಮಹಿಳೆ ತಿರುವಣ್ಣಾಮಲೈ ಖಾಸಗಿ ಲಾಡ್ಜ್ ನಲ್ಲಿ ತಂಗಿದ್ದಳು. ಪ್ರವಾಸಿ ಮಾರ್ಗದರ್ಶಕ ಮಹಿಳೆಯನ್ನು ವಿವಿಧ ಆಶ್ರಮಗಳಿಗೂ ಕರೆದೊಯ್ದಿದ್ದ. ಇದೇ ವೇಳೆ ಅರುಣಾಚಲ ಬೆಟ್ಟಕ್ಕೆ ಧ್ಯಾನಕ್ಕೆಂದು ಕರೆದೊಯ್ದು ಕೃತ್ಯವೆಸಗಿದ್ದಾಗಿ ಆರೋಪಿಸಲಾಗಿದೆ.