ಟ್ವಿಟರ್ ಬಳಕೆದಾರಿಣಿ ಲೌಸಿಯಾ ಡೇವಿಸ್ ಇತ್ತೀಚೆಗೆ ಶೇರ್ ಮಾಡಿರುವ ಈ ವಿಡಿಯೋದಲ್ಲಿ, ಐಸ್ ಕ್ರೀಂ ವರ್ತಕನ ಕೊನೆಯ ಯಾತ್ರೆಯ ವೇಳೆ ಬಹಳಷ್ಟು ಸಂಖ್ಯೆಯಲ್ಲಿ ಐಸ್ ಕ್ರೀಂ ವ್ಯಾನ್‌ಗಳು ಆಗಮಿಸಿದ್ದು ಗಮನ ಸೆಳೆಯುತ್ತಿದೆ.
ಹಸ್ಸನ್ ಡೆರ್ವಿಶ್ ಹೆಸರಿನ 62 ವರ್ಷದ ಈ ಐಸ್ ಕ್ರೀಂ ವ್ಯಾಪಾರಿ ದಕ್ಷಿಣ ಲಂಡನ್‌ನವರಾಗಿದ್ದಾರೆ. ಕಳೆದ 40 ವರ್ಷಗಳಿಂದ ಐಸ್ ಕ್ರೀಂ ಮಾರುತ್ತಿರುವ ಹಸ್ಸನ್ ಇಲ್ಲಿನ ಲೆವಿಶ್ಹಾಮ್‌ನಲ್ಲಿ ಐಸ್ ಕ್ರೀಂ ಫ್ಯಾಕ್ಟರಿಯೊಂದನ್ನು ಹೊಂದಿದ್ದಾರೆ. ಗ್ರಾಹಕರು ಹಾಗೂ ಐಸ್ ಕ್ರೀಂ ವರ್ತಕರ ಬಳಗದಲ್ಲಿ ಹಸ್ಸನ್ ಭಾರೀ ಜನಪ್ರಿಯರಾಗಿದ್ದರು.
ನೀವು ಸರ್ಕಾರಕ್ಕೆ ಕೆಲಸ ಮಾಡುತ್ತಿದ್ದೀರಾ….? ವರದಿಗಾರನಿಗೆ ರಾಹುಲ್ ಗಾಂಧಿ ಪ್ರಶ್ನೆ
ಅವರ ಅಂತಿಮ ಯಾತ್ರೆಗೆ ಜಿಂಗಲ್ ಬಾರಿಸುತ್ತಿದ್ದ 10 ಐಸ್ ಕ್ರೀಂ ವಾಹನಗಳು ಬಂದಿದ್ದವು. ಗ್ರೀನ್‌ವಿಚ್ ಮತ್ತು ಲೆವಿಶ್ಹಾಮ್ ನಡುವೆ ಹಸ್ಸನ್ ಅಂತಿಮ ಯಾತ್ರೆ ಕೈಗೊಳ್ಳಲಾಗಿತ್ತು.
ವಿಡಿಯೋ ಕ್ಲಿಪ್ ವೀಕ್ಷಿಸಿದ ಬಳಕೆದಾರರು ಭಾವುಕರಾಗಿದ್ದು, ಭಾವಪೂರ್ಣ ಸಂದೇಶಗಳನ್ನು ಕಾಮೆಂಟ್ ರೂಪದಲ್ಲಿ ಹಾಕಿದ್ದಾರೆ. 13.4 ದಶಲಕ್ಷಕ್ಕೂ ಹೆಚ್ಚಿನ ವೀವ್ಸ್ ಪಡೆದಿರುವ ವಿಡಿಯೋವನ್ನು 8.67 ಲಕ್ಷಕ್ಕೂ ಹೆಚ್ಚು ಬಾರಿ ಲೈಕ್ ಮಾಡಲಾಗಿದೆ.