ಕುಡುಕರಿಗೆ ತಾವೇನು ಮಾಡುತ್ತಿದ್ದೇವೆ ಎಂಬ ಪ್ರಜ್ಞೆಯೇ ಇರುವುದಿಲ್ಲ. ಕಂಠಪೂರ್ತಿ ಕುಡಿದು ಎಲ್ಲೆಂದರಲ್ಲಿ ಬಿದ್ದಿರುತ್ತಾರೆ. ಆದರೆ ಇಲ್ಲೊಬ್ಬ ವ್ಯಕ್ತಿ ಬೆತ್ತಲೆಯಾಗಿ ಬಾರ್ ಪ್ರವೇಶಿಸಿರುವುದು ಎಲ್ಲರಿಗೂ ಅಚ್ಚರಿ ತಂದಿದೆ.
ಹೌದು, ಇಂಗ್ಲೆಂಡ್ ನಲ್ಲಿ ವ್ಯಕ್ತಿಯೊಬ್ಬ ಏಕಾಏಕಿ ತನ್ನ ಬಟ್ಟೆಗಳನ್ನು ಕಳಚಿ ಬಾರ್ ಪ್ರವೇಶಿಸಿದ್ದಾನೆ. ಈತನನ್ನು ನೋಡಿದ ಸಿಬ್ಬಂದಿ ಒಂದು ಕ್ಷಣ ಗರಬಡಿದವರಂತೆ ನಿಂತಿದ್ದಾರೆ. ಆದರೆ ಬೆತ್ತಲೆಯಾಗಿ ಬಂದಂತಹ ವ್ಯಕ್ತಿಯು ಯಾವುದೇ ಅನುಚಿತ ವರ್ತನೆ ತೋರಿಲ್ಲ ಎಂದು ಹೇಳಲಾಗಿದೆ. ಅಷ್ಟೇ ಅಲ್ಲ ಮದ್ಯವನ್ನು ಕೂಡ ಖರೀದಿಸಿಲ್ಲವಂತೆ. ಏನೊಂದು ಮಾತನಾಡದೆ ಆತ ಹಿಂದಿರುಗಿದ್ದಾನೆ.
ಗೂಡ್ಸ್ ವಾಹನ ಡಿಕ್ಕಿಯಾಗಿ ಬೈಕ್ ನಲ್ಲಿದ್ದ ಮೂವರ ಸಾವು, ಸ್ಥಳದಲ್ಲೇ ವಾಹನ ಬಿಟ್ಟು ಚಾಲಕ ಪರಾರಿ
ಬೆತ್ತಲೆಯಾಗಿ ಬಂದಿದ್ದ ವ್ಯಕ್ತಿಯ ಫೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಲಾಗಿದ್ದು, ಫೋಟೋ ನೋಡಿದ ನೆಟ್ಟಿಗರು ದಿಗ್ಭ್ರಾಂತರಾಗಿದ್ದಾರೆ. ಸ್ನೇಹಿತನ ಬಳಿ 20 ಪೌಂಡ್ ಬೆಟ್ ಕಟ್ಟಿ ಆ ವ್ಯಕ್ತಿ ಬೆತ್ತಲೆ ಬಂದಿರುವುದಾಗಿ ನಂತರ ಬಾರ್ ಸಿಬ್ಬಂದಿಗೆ ಮಾಹಿತಿ ದೊರೆತಿರುವುದಾಗಿ ಹೇಳಲಾಗಿದೆ.