ನವದೆಹಲಿ: ಕೇಂದ್ರ ಸರ್ಕಾರದ ಒಟ್ಟು ಸಾಲ 2024ರ ಮಾರ್ಚ್ ಅಂತ್ಯದ ವೇಳೆಗೆ 171.78 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ.
2023ರ ಡಿಸೆಂಬರ್ ಕೊನೆಯಿಂದ ಆರಂಭವಾಗಿ ಮಾರ್ಚ್ 2024ರ ಅವಧಿಯಲ್ಲಿ ಸಾಲದ ಪ್ರಮಾಣ ಶೇಕಡ 3.4 ರಷ್ಟು ಹೆಚ್ಚಾಗಿದೆ ಎಂದು ಹಣಕಾಸು ಸಚಿವಾಲಯದ ಸಾರ್ವಜನಿಕ ಸಾಲ ನಿರ್ವಹಣೆ ತ್ರೈಮಾಸಿಕ ವರದಿಯಲ್ಲಿ ತಿಳಿಸಲಾಗಿದೆ.
ಡಿಸೆಂಬರ್ 2023ರ ಅಂತ್ಯದ ವೇಳೆಗೆ 166.14 ಲಕ್ಷ ಕೋಟಿ ರೂ. ಸಾಲ ಇತ್ತು. ಈ ಆರ್ಥಿಕ ವರ್ಷದ ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಕೇಂದ್ರ ಬಜೆಟ್ ನ ವಿತ್ತೀಯ ಕೊರತೆ ಶೇಕಡ 3ರಷ್ಟಾಗಿದೆ. ಲೋಕಸಭೆ ಚುನಾವಣೆಯಲ್ಲಿ ನೀತಿ ಸಂಹಿತೆ ಇದ್ದ ಕಾರಣ ವಿತ್ತೀಯ ಕೊರತೆ ಕಡಿಮೆ ದಾಖಲಾಗಿದೆ. 2023 -24ನೇ ಸಾಲಿನಲ್ಲಿ ಬಜೆಟ್ ವಿತ್ತೀಯ ಕೊರತೆ ಶೇ. 5.6 ರಷ್ಟು ಇತ್ತು. ಇದು ಶೇಕಡ 5.08 ರಷ್ಟು ಆಗಲಿದೆ ಎಂದು ಅಂದಾಜು ಮಾಡಲಾಗಿತ್ತು. 2025- 26 ನೇ ಸಾಲಿನಲ್ಲಿ ಶೇ. 4.5ರಷ್ಟು ವಿತ್ತೀಯ ಕೊರತೆ ಸಾಧಿಸುವ ಗುರಿ ಹೊಂದಲಾಗಿದೆ.